Blog

ಜಾರ್ಕಳ ಮುಂಡ್ಲಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ



🔴ಸ್ವಾಸ್ಥ್ಯ ಸಮಾಜ‌ ನಿರ್ಮಾಣದಲ್ಲಿ ಸಂಘ ಸಂಸ್ಥೆಯ ಪಾತ್ರ ಮಹತ್ತರ – ಬಾಲಕೃಷ್ಣ ಹಿರಿಂಜ

ಕಾರ್ಕಳ :  ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದಾಗಿದೆ.  ಈ ನಿಟ್ಟಿನಲ್ಲಿ ಮುಂಡ್ಲಿ ಗ್ರಾಮದಲ್ಲಿ ಯುವ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಆಯೋಜಿಸಿರುವ ಆರೋಗ್ಯ ತಪಸಣಾ ಶಿಬಿರ ಮಾದರಿದಾಯಕ ಎಂದು  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ತಾಲೂಕು ಯೋಜನಾಧಿಕಾರಿ  ಬಾಲಕೃಷ್ಣ ಹಿರಿಂಜ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಶಿ ಯೋಜನೆ ಬಿ.ಸಿ. ಟ್ರಸ್ಟ್ ರಿ. ಕಾರ್ಕಳ ತಾಲೂಕು, ಯುವಸ್ಪಂದನ ಗೆಳೆಯರ ಬಳಗ ಜಾರ್ಕಳ ಮುಂಡ್ಲಿ  ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಶಿ ಯೋಜನೆ ಬಿ.ಸಿ. ಟ್ರಸ್ಟ್ ಜಾರ್ಕಳ ಮುಂಡ್ಲಿ ಒಕ್ಕೂಟದ ಸಹಯೋಗದೊಂದಿಗೆ ಮಾ.‌1 ರಂದು ಜಾರ್ಕಳ ಮುಂಡ್ಲಿಯ ಯುವಸ್ಪಂದನ ಗೆಳೆಯರ ಬಳಗ ಕಚೇರಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಶಿಕ್ಷಕ‌ ಸಂಜೀವ ದೇವಾಡಿಗ ಮಾತನಾಡಿ, ಗ್ರಾಮದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು.  ಪ್ರತಿಯೊಂದು ಗ್ರಾಮದಲ್ಲೂ ಯುವಸ್ಪಂದನದಂತಹ ತಂಡ ನಿರ್ಮಾಣವಾಗಲಿ ಎಂದರು. 

ಹೆರ್ಮುಂಡೆ ತರುಣ ಭಾರತ ಟ್ರಸ್ಟ್ ಅಧ್ಯಕ್ಷ ಸತೀಶ್ ಹೆಗ್ಡೆ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಡಾ.ಟಿ.ಎ.ಪೈ. ರೋಟರಿ ಆಸ್ಪತ್ರೆಯ ವೈದ್ಯ ಸಮರ್ಥ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಶಿ ಯೋಜನೆ ಬಿ.ಸಿ. ಟ್ರಸ್ಟ್ ಜಾರ್ಕಳ ಮುಂಡ್ಲಿ ಒಕ್ಕೂಟದ ಅಧ್ಯಕ್ಷ ರವಿ ಬನಾನ್, ಯುವಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ದಿವಾಕರ್ ಪೂಜಾರಿ, ಸಂಪತ್ ಕುಮಾರ್ ಜೈನ್, ರಘುರಾಮ ಶೆಟ್ಟಿ, ಸಂಜೀವ ಶೆಟ್ಟಿ, ಮಲ್ಲಿಕಾ ಜೈನ್, ರೋಟರಿ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು. ಅಭಿನಂದನ್ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಜ್ವಲ್ ಜೈನ್ ಕಾರ್ಯಕ್ರಮ ನಿರೂಪಿಸಿ, ಶ್ರೀ. ಕ್ಷೇ.ಧ. ಗ್ರಾ.ಯೋ. ಕಾರ್ಕಳ ವಲಯ ಮೇಲ್ವಿಚಾರಕಿ ಗೀತಾ ವಂದಿಸಿದರು.

Related posts

ದ್ವೇಷದ ಬರಹ – ನಿಟ್ಟೆಯ ಸುಧಾಕರ ಮೇಲೆ ಕೇಸು ದಾಖಲು

Madhyama Bimba

ಸಬ್ ಇನ್ಸ್ಪೆಕ್ಟರ್ ನಾಸಿರ್ ಹುಸೇನ್ ನಿಧನ

Madhyama Bimba

ಕುಕ್ಕುಂದೂರುನಲ್ಲಿ ದೌರ್ಜನ್ಯ – ಕೆ ಆರ್ ಎಸ್ ಪಾರ್ಟಿ ಭೇಟಿ – ಸಹಕಾರದ ಭರವಸೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More