ಮೂಡುಬಿದಿರೆ

ಅಬ್ದುಲ್ ಅಹದ್ IPS ಡಿ.ಐ.ಜಿ.ಪಿ ಪದೋನ್ನತಿ

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುತ್ತಿಗೆಯ ಅಬ್ದುಲ್ ಅಹದ್ “` IPS ಅವರಿಗೆ ಸರ್ಕಾರವು ಡಿ.ಐ.ಜಿ.ಪಿ ( Deputy Inspector General of Police) ಹುದ್ದೆಗೆ ಪದೋನ್ನತಿ ನೀಡಿ ಆದೇಶ ಹೊರಡಿಸಿದೆ.` ಈ ಹಿಂದೆ ಅವರು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಡಿಸಿಪಿಯಾಗಿ, ಬಿಎಂಟಿಸಿ ಭದ್ರತೆ ಮತ್ತು ಜಾಗೃತ ವಿಭಾಗದ ನಿರ್ದೇಶಕರಾಗಿ ಹಾಗೂ ಕರಾವಳಿ ಕಾವಲು ಪಡೆಯ ಎಸ್ಪಿಯಾಗಿ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಬ್ದುಲ್ ಅಹದ್ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಡಿಸಿಪಿಯಾಗಿ, ಭ್ರಷ್ಟಾಚಾರ ನಿಗ್ರಹ ದಳ ಹಾಗೂ‌ ಲೋಕಾಯುಕ್ತ ಎಸ್ಪಿಯಾಗಿ ಹಾಗೂ ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರ ದಕ್ಷತೆ ಮತ್ತು ಕರ್ತವ್ಯನಿಷ್ಠೆಯನ್ನು ಪರಿಗಣಿಸಿ ಇದೀಗ ಉನ್ನತ ಹುದ್ದೆಯಾದ ಪೊಲೀಸ್ ಉಪ ಮಹಾನಿರೀಕ್ಷಕ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ.

ಅಬ್ದುಲ್ ಅಹದ್ ಅವರು ಮೂಡುಬಿದಿರೆಯ ಖ್ಯಾತ ಉದ್ಯಮಿ ಅಬು‌ಅಲಾ ಪುತ್ತಿಗೆ ಅವರ ಕಿರಿಯ ಸಹೋದರರಾಗಿದ್ದಾರೆ.

Related posts

 ಶಾಸಕರಿಂದ ಪ್ರೆಸ್ ಕ್ಲಬ್ ಕಟ್ಟಡ ವೀಕ್ಷಣೆ

Madhyama Bimba

ಸಿಪ್ರಿಯನ್ ಪಿಂಟೋ ಇನ್ನಿಲ್ಲ

Madhyama Bimba

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ: ರೂ.1200 ಕೋಟಿ ವ್ಯವಹಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More