ಮೂಡುಬಿದಿರೆ

ಜ. 4ರಂದು ಅಲ್ ಬಿರ್ ಇಂಟರ್ನ್ಯಾಶನಲ್ ಸ್ಕೂಲ್ ನೂತನ ಕಟ್ಟಡ ಲೋಕಾರ್ಪಣೆ, ‘ಕಿಡ್ಸ್ ಫೆಸ್ಟ್’ ಸಂಭ್ರಮ

ಮೂಡುಬಿದಿರೆ: ಕೋಟೆಬಾಗಿಲಿನಲ್ಲಿರುವ ಅಬ್ದುಲ್ ಜಬ್ಬಾರ್ ಉಸ್ತಾದ್ ಮೆಮೋರಿಯಲ್ ಅಲ್ ಬಿರ್ ಇಂಟರ್ನ್ಯಾಶನಲ್ ಸ್ಕೂಲ್‌ನ ನೂತನ ಶಾಲಾ ಕಟ್ಟಡದ ಲೋಕಾರ್ಪಣೆ ಹಾಗೂ ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಅಧೀನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಲ್ ಬಿರ್ ಸ್ಕೂಲ್ಸ್‌ಗಳ ಪ್ರತಿಭಾ ಸ್ಪರ್ಧೆ “ಕಿಡ್ಸ್ ಫೆಸ್ಟ್ 2025-26” ಇದೇ ಬರುವ ಜನವರಿ 04, ಭಾನುವಾರ ಬೆಳಿಗ್ಗೆ 8:30 ರಿಂದ ನಡೆಯಲಿದೆ ಎಂದು ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಸಲಾಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜ 4ರಂದು ಭಾನುವಾರ ಬೆಳಿಗ್ಗೆ 8:30ಕ್ಕೆ ಸಯ್ಯದ್ ಅಲೀ ತಂಙಳ್ ಕುಂಬೋಳ್ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸರಿಯಾಗಿ 9 ಗಂಟೆಗೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಅವರು ನೂತನ ಶಾಲಾ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾ‌ನೆರವೇರಿಸಲಿದ್ದಾರೆ. ಅಲ್ ಬಿರ್ ಸ್ಕೂಲ್ಸ್‌ನ ಜನರಲ್ ಕನ್ವೀನರ್ ಹಾಗೂ ಸಮಸ್ತ ಕೇಂದ್ರ ಮುಶಾವರ ಜೊತೆ ಕಾರ್ಯದರ್ಶಿ ಶೈಖುನಾ ಉಮರ್ ಫೈಝಿ ಮುಕ್ಕಂ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲಾಡಿ ಮಸೀದುನ್ನೂರು ಖತೀಬ್ ಫಾಯಿಝ್ ಫೈಝಿ ಲಾಡಿ ಸ್ವಾಗತಿಸಲಿದ್ದಾರೆ.


ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್, ಸಯ್ಯದ್ ಮೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, ಸಯ್ಯದ್ ಅಮೀರ್ ತಂಙಳ್ ಕಿನ್ಯಾ, ಶೈಖುನಾ ಮುಹಮ್ಮದ್ ಅಝರ್ ಫೈಝಿ ಬೊಳ್ಳೂರು, ರಫೀಖ್ ಹುದವಿ ಕೋಲಾರಿ ಸೇರಿದಂತೆ ಅನೇಕ ಧಾರ್ಮಿಕ ಪಂಡಿತರು ಭಾಗವಹಿಸಲಿದ್ದಾರೆ. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಮಿಥುನ್ ರೈ, ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಅಬ್ದುಲ್ ನಾಸಿರ್ ಸೇರಿದಂತೆ ಹಲವು ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕನ್ವೀನರ್ ಅಬ್ದುಲ್ ರಜಾಕ್ ಮದನಿ, ಅಲ್ ಬಿರ್ ಸ್ಕೂಲ್ ಅಧ್ಯಕ್ಷ ಉಸ್ಮಾನ್ ಅಬ್ದುಲ್ಲಾ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಮಾಲಿಕ್, ಟ್ರಸ್ಟಿ ಅಲಾ ಗಂಟಲಕಟ್ಟೆ, ವೈಸ್ ಕನ್ವೀನರ್ ಅಬ್ದುಲ್ ಗಫೂರ್ ಹಾಗೂ ಸ್ವಾಗತ ಸಮಿತಿ ಸದಸ್ಯ ಲಿಯಾಕತ್ ಅಲಿ ಸುದ್ದಿಗೋಷ್ಠಿಯಲ್ಲಿದ್ದರು.

Related posts

ಮೂಡಬಿದ್ರೆ ರೋಟರಿ ಕೇಂದ್ರೀಯ ಶಾಲೆ ಸಿಬಿಎಸ್‌ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ

Madhyama Bimba

ಸಹಿಷ್ಣುತೆ, ಸಹಾನುಭೂತಿ ಎಲ್ಲಾ ಧರ್ಮಗಳ ಆಧಾರ: ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪ೦ಡಿತಾಚಾರ್ಯವರ್ಯ -ಎಕ್ಸಲೆ೦ಟ್ ಮೂಡುಬಿದಿರೆಯಲ್ಲಿ ಸರ್ವಧರ್ಮ ಅರಿವು ಕಾರ್ಯಕ್ರಮ

Madhyama Bimba

ಮೂಡುಬಿದಿರೆಯಲ್ಲಿ ಸಮಾಜ ಮಂದಿರ, ಯುವವಾಹಿನಿಯಿಂದ ಬೆದ್ರ ಗೂಡುದೀಪ ಮತ್ತು ರಂಗೋಲಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More