Blog

ಮತದಾರ ಪಟ್ಟಿ ಪರಿಷ್ಕರಣೆ ವೋಟ್ ಚೋರಿದಾರರಿಗೆ ಆತಂಕ: ಸುನಿಲ್ ಕುಮಾರ್


ಕಾರ್ಕಳ : ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಆರಂಭಿಸಿರುವುದು ವೋಟ್ ಚೋರಿದಾರರಿಗೆ ಆತಂಕ ಆರಂಭವಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರು
ಬಿಜೆಪಿ ಕಾರ್ಕಳ ಮಂಡಲ ವತಿಯಿಂದ ಜ. 24ರಂದು ಬಾಲಾಜಿ ಇನ್ ಹೊಟೇಲ್‌ನಲ್ಲಿ ನಡೆದ ಬಿಎಲ್‌ಎ-2 ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿ ಸರಿಯಾಗಿದ್ದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಲು ಸಾಧ್ಯ. 1950 ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಿತ್ತು. ಆನಂತರ ಪ್ರತಿ ಹತ್ತು ವರ್ಷಕ್ಕೊಮ್ಮೆ ಪರಷ್ಕರಣೆ ನಡೆಯುತ್ತ ಬಂದಿತ್ತು.ಆದರೆ 2002 ನಂತರ ಪರಿಷ್ಕರಣೆ ನಡೆದಿಲ್ಲ ಕಾಂಗ್ರೆಸ್ ಕಾಲದಲ್ಲೂ ಪರಿಷ್ಕರಣೆ ನಡೆದಿದೆ. ಆದರೆ ಈಗ ಮಾತ್ರ ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ ಎಂದರು. ಮತದಾರ ಪಟ್ಟಿ ಸರಿ ಇದ್ದಲ್ಲಿ ಮಾತ್ರ ಉಳಿದ ಎಲ್ಲ ವ್ಯವಸ್ಥೆಗಳು ಸರಿ ಇರಲು ಸಾಧ್ಯ. ಅನ್ಯ ದೇಶಗಳಿಂದ ಜನರ ನುಸುಳುವಿಕೆಯಿಂದ ಎಲ್ಲಾ ರಾಜ್ಯಗಳಿಗೆ ಸಮಸ್ಯೆ ಉಂಟಾಗಿದೆ ಈ ಸಂದರ್ಭದಲ್ಲಿ ಪತದಾರರ ಪಟ್ಟಿ ಪರಿಷ್ಕರಣೆ ನಡೆಯುವುದು ಅತ್ಯಂತ ಸೂಕ್ತ ಎಂದರು ಇದಲ್ಲದೆ ಭಾರತ ಪೌರತ್ವ ದೃಢೀಕರಣಕ್ಕೂ ಇದು ಅವಶ್ಯವೆಂದರು. ಅಭಿವೃದ್ಧಿಯ ವಿಷಯದಲ್ಲಿ ಕಾಂಗ್ರೆಸ್ ಮತ್ತು ಅಭಿವೃದ್ಧಿ ವಿರುದ್ಧ ಪದಗಳು. ಕಾಂಗ್ರೆಸ್‌ಗೆ ಅಭಿವೃದ್ಧಿಗೆ ಯಾವುದೇ ಸಂಬಂಧವಿಲ್ಲ ಅವೆರಡೂ ವಿರುದ್ಧ ಪದಗಳು ಎಂದರು. ಪ್ರತಿಯೊಂದರಲ್ಲೂ ಆಧುನಿಕತೆಯನ್ನು ಅನುಸರಿಸುತ್ತಿರುವ ನಾವು ಮತದಾನದಲ್ಲಿ ಕಾಂಗ್ರೆಸ್ ಇಂದು ಬ್ಯಾಲೆಟ್ ಪೇಪರ್ ಬೇಕೆನ್ನುತ್ತಿದೆ ಈ ಬಗ್ಗೆ ಅವರಲ್ಲೇ ಗೊಂದಲವಿದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಪ್ರಾಸ್ತವಿಕ ಮಾತುಗಳನಾಡಿ ಬೂತ್ ಮಟ್ಟದಲ್ಲಿ ನಾವು ಗಟ್ಟಿಯಾದಗ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವೆಂದರು. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಪ್ರಧಾನ ಕಾರ್ಯದರ್ಶಿ ಮಹಾವೀರ್ ಹೆಗ್ಡೆ, ರೇಷ್ಮಾ ಉದಯ ಶೆಟ್ಟಿ, ಗೇರು ಅಬಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ರಜನಿ ಪೈ ಉಪಸ್ಥಿತರಿದ್ದರು. ಹರ್ಷವರ್ಧನ ನಿಟ್ಟೆ ಕಾರ್ಯಕ್ರಮ ನಿರೂಪಿಸಿದರು.

Related posts

ನಿಟ್ಟೆ ದೂಪದ ಕಟ್ಟೆಯಲ್ಲಿ ಮುಗುರು ಮಲ್ಲಿಗೆ

Madhyama Bimba

ನಿಧನ – ಅರುಣ್ ಕುಮಾರ್

Madhyama Bimba

ಬೀದಿಗೆ ಬಂದ ಯಸಳೂರು ಕುಟುಂಬ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More