ಮೂಡುಬಿದಿರೆ

 ಉಮೇಶ್ ಭಟ್ ಅವರಿಗೆ ಸಂಸ್ಕೃತದಲ್ಲಿ ಪ್ರಥಮ ರ್‍ಯಾಂಕ್

ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ವೇ. ಮೂ. ಉಮೇಶ್ ಭಟ್ ಅವರು ಸಂಸ್ಕೃತ ಸ್ನಾತ್ತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಅವರು ಕರ್ನಾಟಕ ರಾಜ್ಯ ಮುಕ್ತ ವಿವಿ ಮೈಸೂರು ಯಲ್ಲಿ ಅಧ್ಯಯನ ನಡೆಸಿದ್ದಾರೆ. ವಾಲ್ಪಾಡಿ ಗ್ರಾಮದ ಅನುವಂಶಿಕ ಅಸ್ರಣ್ಣ ವಂಶಸ್ಥರು, ಶಿರ್ತಾಡಿ ಅರ್ಜುನಪುರ ದೇವಸ್ಥಾನದ ಪ್ರಧಾನ ತಂತ್ರಿಯಾಗಿರುವ ಅವರು ಮೈಸೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಪದವಿ ಸಹಿತ ಚಿನ್ನದ ಪದಕ ಸ್ವೀಕರಿಸಿದ್ದಾರೆ. ಅವರು ವೇ ಮೂ ಉಮಾಶಂಕರ ಭಟ್ ಅವರ ಪುತ್ರ.

ಅವರನ್ನು ಅರ್ಜುನಪುರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ಕೊಂಕೆ, ಹಾಗೂ ಸದಸ್ಯರುಗಳು ಅಭಿನಂದಿಸಿದ್ದಾರೆ.

Related posts

ಎಕ್ಸಲೆಂಟ್ ಸ್ಕೂಲ್(ಸಿಬಿಎಸ್ಇ) ವಾರ್ಷಿಕೋತ್ಸವ

Madhyama Bimba

ಮೂಡುಬಿದಿರೆಯಲ್ಲಿ ಸಮಾಜ ಮಂದಿರ, ಯುವವಾಹಿನಿಯಿಂದ ಬೆದ್ರ ಗೂಡುದೀಪ ಮತ್ತು ರಂಗೋಲಿ

Madhyama Bimba

ಜಿ.ಎಲ್. ಆಚಾರ್ಯ ಜುವೆಲರ್ಸ್‌ ಮೂಡುಬಿದಿರೆ- ಎ.12: ನೂತನ ವಿಶಾಲ ಮಳಿಗೆ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More