ಕಾರ್ಕಳಹೆಬ್ರಿ

ಸೂರಿಮಣ್ಣು : ಭಜನಾ ಸುವರ್ಣ ಸಂಭ್ರಮ ಸಂಪನ್ನ

ಹೆಬ್ರಿ : ಭಜನೆಯು ಭಗವಂತನಿಗೆ ಅತ್ಯಂತ ಪ್ರೀತಿಯ ಸೇವೆ. ಭಜನೆಯ ಮೂಲಕ ಭಗವಂತನನ್ನು ಆರಾಧಿಸಿದಾಗ ನಮ್ಮ ಬದುಕು ಸಮೃದ್ಧವಾಗುತ್ತದೆ. ಕಲಿಯುಗದಲ್ಲಿ ದೇವರನ್ನು ಸಮಷ್ಠಿಯಾಗಿ ಆರಾಧಿಸಲು ಒಳ್ಳೇಯ ಸುಲಭದ ಮಾರ್ಗವೇ ಭಜನೆ. ಸೂರಿಮಣ್ಣಿನಲ್ಲಿ ಭಜನೆಯ ಲೋಕವನ್ನೇ ಸೃಷ್ಠಿಸಿ ಅದ್ಬುತ ಸೇವೆ ನಡೆದಿದೆ ಎಂದು ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಕಾಣಿಯೂರು ಮಠಾದೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.


ಅವರು ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿ ಸೂರಿಮಣ್ಣು ಇದರ ವತಿಯಿಂದ 8 ದಿನಗಳ ಕಾಲ ನಡೆದ ಭಜನಾ ಸುವರ್ಣ ಸಂಭ್ರಮ ಸಂಪನ್ನ ಕಾರ್ಯಕ್ರಮದಲ್ಲಿ   ಆಶೀರ್ವಚನ ನೀಡಿದರು.


ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಮಾತನಾಡಿ ಭಜನೆಯ ಮೂಲಕ ಸೂರಿಮಣ್ಣು ಪ್ರಖ್ಯಾತಿ ಪಡೆದಿದೆ. ಧಾರ್ಮಿಕತೆಯ ಲೋಕವೇ ಸೃಷ್ಠಿಯಾಗಿದೆ. ಸೂರಿಮಣ್ಣು ಕ್ಷೇತ್ರದ ಮೂಲಕ ಪರಿಸರದ ಸಮಗ್ರ ಅಭಿವೃದ್ಧಿ ವಿಶೇಷ ಸಹಕಾರ ನೀಡುವುದಾಗಿ ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಶ್ರೀಕಾಂತ ಶೆಟ್ಟಿ ಕಾರ್ಕಳ ಭಜನೆಯ ಮೂಲಕ ಹಚ್ಚಿದ ಭಜನೆಯ ದೀಪ ಇಂದು ನಂದಾದೀಪವಾಗಿ ಬೆಳಗುತ್ತಿದೆ ಎಂದರು.

ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಭ್ರಮದ ಯಶಸ್ಸಿಗೆ ಸಹಕರಿಸಿ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ವೇದಮೂರ್ತಿ ನಾರಾವಿ ಗುರುರಾಜ್‌ ಭಟ್‌ ಮತ್ತು ವೇದಮೂರ್ತಿ ನಕ್ರೆ ರವಿ ಆಚಾರ್ಯ ನೇತ್ರತ್ವದಲ್ಲಿ ನಡೆದ ಋಕ್‌ ಸಂಹಿತಾಯಾಗ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು. 8 ದಿನಗಳ ಕಾಲ 152 ಭಜನಾ ಮಂಡಳಿಯಿಂದ 168 ಗಂಟೆಗಳ ಭಜನೆ ನಡೆಯಿತು.

ಸೂರಿಮಣ್ಣು ಭಜನೆಯ ಸ್ಥಾಪಕಾಧ್ಯಕ್ಷ ಶ್ರೀಧರ ಶೆಟ್ಟಿ ಪಡ್ಜಾಲ್‌ ದಂಪತಿಯನ್ನು ಗೌರವಿಸಲಾಯಿತು. ಶ್ರೀಧರ ಶೆಟ್ಟಿ ಮುದ್ರಾಡಿ, ಶ್ರೀನಿವಾಸ ಪೂಜಾರಿ ಎರ್ಲಪಾಡಿ, ಬಾಲಪ್ರತಿಭೆ ಸಾನಿಧ್ಯ ಆಚಾರ್ಯ ಪೆರ್ಡೂರು ಸಹಿತ ಭಜನೆಯಲ್ಲಿ ಸಹಕಾರ ನೀಡಿದ ಹಲವರನ್ನು ಸನ್ಮಾನಿಸಲಾಯಿತು.

ಸೂರಿಮಣ್ಣು ಭಜನೆಯ ರೂವಾರಿ ವೇದಮೂರ್ತಿ ಸೂರಿಮಣ್ಣು ಸದಾಶಿವ ಉಪಾಧ್ಯಾಯ ದಂಪತಿಯನ್ನು ಸೂರಿಮಣ್ಣು ಭಜನಾ ಮಂಡಳಿಯ ಸರ್ವಸದಸ್ಯರು ಗೌರವಿಸಿದರು. ಮಹಾಅನ್ನ ಸಂತರ್ಪಣೆ, ಗೌರವ ಸಮರ್ಪಣೆ, ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ನಡೆಯಿತು.

ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರೀಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಮುಂಬೈ, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಉದ್ಯಮಿ ವಾಸುದೇವಾ ಭಟ್‌ ಹಿರಿಯಡ್ಕ, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್‌ ಶಿವಪುರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ್‌, ಗುರುರಾಜ್‌ ಭಟ್‌ ನಾರಾವಿ, ಡಾ.ಗುರುಪ್ರಸಾದ್‌ ಕೊಡಂಚ ಶಿವಪುರ, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ, ಸೂರಿಮಣ್ಣು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿ ಹಾಗೂ ವಿವಿಧ ಭಜನ ಮಂಡಳಿಯ ಸದಸ್ಯರು, ಭಜನಾ ಸುವರ್ಣ ಸಂಭ್ರಮ ಸಮಿತಿ, ವಿವಿಧ ಉಪಸಮಿತಿಯ ಸದಸ್ಯರು, ಸ್ವಯಂ ಸೇವಕರು, ಸ್ಥಳೀಯ ಭಕ್ತ ಸಮೂಹ, ಭಜನಾ ಮಂಡಳಿಯ ಸದಸ್ಯರು, ಭಜನಾ ಸುವರ್ಣ ಸಂಭ್ರಮದ ರೂವಾರಿ ಗೌರವಾಧ್ಯಕ್ಷ ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಸೂರಿಮಣ್ಣು ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷ ಶ್ರೀಧರ ಶೆಟ್ಟಿ ಪಡ್ಜಾಲ್‌, ಭಜನಾ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ಶಿವಪುರ ಸುರೇಶ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ ಪುತ್ತಿ, ಜೊತೆ ಕಾರ್ಯದರ್ಶಿ ಸುಭಾಶ್ಚಂದ್ರ ನಾಯ್ಕ್‌, ಕೊಶಾಧಿಕಾರಿ ಪ್ರಸನ್ನ ಶೆಟ್ಟಿ ಒಂಬತೊಕ್ಲು, ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಯುವ ಘಟಕದ ಅಧ್ಯಕ್ಷ ಚೇತನ್‌ ಕುಲಾಲ್‌, ಗೌರವ ಸಲಹೆಗಾರ ಸುಧಾಕರ ಶೆಟ್ಟಿ ಮುನಿಯಾಲು, ಉಪಾಧ್ಯಕ್ಷರಾದ ದಿನೇಶ ಶೆಟ್ಟಿ ಸೂರಿಮಣ್ಣು, ರಮೇಶ ಶೆಟ್ಟಿ ಪಡ್ಜಾಲ್‌, ಶೇಖರ ಕುಲಾಲ್‌,ಭೋಜ ಕುಲಾಲ್‌, ಗೋಪಾಲ ಕುಲಾಲ್‌, ವಿಠ್ಠಲ ಶೆಟ್ಟಿ, ವರಂಗ ರಾಮಚಂದ್ರ ಭಟ್‌ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಸೂರಿಮಣ್ಣು ಮಠದ ವಿದ್ವಾನ್‌ ರವಿರಾಜ್‌ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್‌, ಗಗನ್‌ ಶೆಟ್ಟಿ ಒಂಬತೋಕ್ಲು ನಿರೂಪಿಸಿದರು.

Related posts

 ನಿಟ್ಟೆ ಶ್ರೀ ರಾಜ ರಾಜೇಶ್ವರಿ ಸದ್ಗುರು ಶ್ರೀ ನಿತ್ಯಾನಂದ ಕ್ಷೇತ್ರ ನೆಲ್ಲಿ ಇದರ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುನಿಲ್ ಕುಮಾರ್

Madhyama Bimba

ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‌ ನಲ್ಲಿ ವಿಶೇಷ ಆದ್ಯತೆ ನೀಡಿ : ಮುಖ್ಯಮಂತ್ರಿಗೆ ನೀರೆ ಕೃಷ್ಣ ಶೆಟ್ಟಿ ಪತ್ರ

Madhyama Bimba

ಕಾರ್ಕಳ ಮತ್ತು ಶಿರ್ವ ಜೆಎಂಜೆ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು ಲಭ್ಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More