ಮೂಡುಬಿದಿರೆ

ನವಮೈತ್ರಿ ಸಹಕಾರಿ ಸಂಘದ ಸ್ವಂತ ಕಟ್ಟಡ ಮೈತ್ರಿ ಸೌಧ ಉದ್ಘಾಟನೆ

ಶಿರ್ತಾಡಿ: ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಇದರ ಕೇಂದ್ರ ಕಚೇರಿ ಹಾಗೂ ವಾಣಿಜ್ಯ ವಸತಿ ಸಂಕೀರ್ಣ ಮೈತ್ರಿ ಸೌಧದ ಉದ್ಘಾಟನೆಯು ಫೆ. 8ರಂದು ಶಿರ್ತಾಡಿಯಲ್ಲಿ ಜರುಗಿತು.

ಶಿರ್ತಾಡಿ ಭುವನ ಜ್ಯೋತಿ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಡಿಸೋಜಾರವರು ಮೈತ್ರಿಸೌಧ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ತತ್ವದಡಿ ಸುಸಜ್ಜಿತ ಸಂಕೀರ್ಣ ನಿರ್ಮಾಣಗೊಂಡಿದೆ. ಸಹಕಾರಿಯ ನೆರವನ್ನು ಜನತೆ ಪಡೆದುಕೊಂಡು ಆರ್ಥಿಕವಾಗಿ ಬೆಳವಣಿಗೆ ಕಾಣುವಂತೆ ಸಲಹೆಯಿತ್ತರು.


ನವಮೈತ್ರಿ ಸೌಹಾರ್ದ ಸಹಕಾರಿಯ ಕೇಂದ್ರ ಕಚೇರಿ ಹಾಗೂ ಶಿರ್ತಾಡಿ ಶಾಖಾ ಕಚೇರಿಯನ್ನು ಮೈತ್ರಿಸೌಧ ಸಂಕೀರ್ಣದಲ್ಲಿ ವಕೀಲರಾದ ಮಯೂರ ಕೀರ್ತಿಯವರು ಉದ್ಘಾಟಿಸಿ ಸಹಕಾರಿಯಲ್ಲಿ ತಮ್ಮ ದುಡ್ಡನ್ನು ತೊಡಗಿಸಿಕೊಂಡು, ಅಗತ್ಯಬಿದ್ದಲ್ಲಿ ಅಲ್ಲಿಂದ ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆಯಿತ್ತರು.
ನವಮೈತ್ರಿ ಸಹಕಾರಿಯ ಪ್ರಾರಂಭದಿಂದಲೂ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿರುವ ಮಾತೃಭೂಮಿ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕೊಂಪದವು ಅವರನ್ನು ಶಾಲುಹೊದಿಸಿ ಫಲ ಪೇಟ ಸ್ಮರಣಿಕೆ ಸನ್ಮಾನ ಪತ್ರದೊಂದಿಗೆ ಅಭಿನಂದಿಸಲಾಯಿತು.

ಶಿರ್ತಾಡಿ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ, ದ. ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ, ಶಿರ್ತಾಡಿ ಕಜೆ ಶ್ರೀಮತಿ ಹೆಲೆನ್ ಮರಿಯ ಲೋಬೋ, ನಾರಾವಿ ಶ್ರೀಮತಿ ಆಶಾ ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ವಿ. ಶೆಟ್ಟಿ, ಉಪಾಧ್ಯಕ್ಷ ವಿನಯ ಹೆಗ್ಡೆ, ನಿರ್ದೇಶಕರಾದ ಕೆ. ಮಹಾವೀರ ಜೈನ್, ಎಸ್. ಪ್ರವೀಣ್ ಕುಮಾರ್, ಮಹಾವೀರ ಮುದ್ಯ , ಲ್ಯಾನ್ಸಿ ಡೇಸ, ಫ್ರಾಂಕಿ ಎಲ್. ಪಿಂಟೊ, ರಕ್ಷಿತ್ ಆರ್., ಅರುಣ್ ಶೆಟ್ಟಿ, ಸದಾನಂದ ಪೂಜಾರಿ, ಶ್ರೀಮತಿ ಬಬಿತ ಆರ್. ಶೆಟ್ಟಿ, ಶ್ರೀಮತಿ ಶಾರದಾ ಸುವರ್ಣ, ರವೀಂದ್ರ ಬಿ. ಅಮೀನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಶ್ಮಿತಾ ಮತ್ತು ಬಳಗದವರು ಪ್ರಾರ್ಥನೆಗೈದರು. ನವಮೈತ್ರಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಜೆ.ಕೆ. ಸ್ವಾಗತಿಸಿದರು. ಸ್ವಸಹಾಯ ಸಂಘಗಳ ಮೇಲ್ವಿಚಾರಕರಾದ ಹೊನ್ನಪ್ಪ ಸಾಲ್ಯಾನ್, ಧನ್ಯವಾದವಿತ್ತರು. ಪತ್ರಕರ್ತ ನವೀನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.ಶಾಖಾ ವ್ಯವಸ್ಥಾಪಕರಾದ ಸತೀಶ್ ಕೆ., ಪ್ರಜ್ವಲ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಸಭಾ ಕಾರ್ಯಕ್ರಮದ ನಂತರ ಅಮ್ಮು ಆಮುಂಡರಾ ಎಂಬ ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಂಡಿತು.

Related posts

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ  GIGGLE & GROW’ ಮಕ್ಕಳ ಆಟದ ಮನೆಯ ಉದ್ಘಾಟನೆ

Madhyama Bimba

ಮೂಡುಬಿದಿರೆ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Madhyama Bimba

ನಿಡ್ಡೋಡಿ ಬೈಕ್ ಸವಾರ ಸಾವು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More