ಕಾರ್ಕಳ

ಪೋಷಕರೇ ಮಕ್ಕಳಿಗೆ ಆದರ್ಶ: ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ

ಕಾರ್ಕಳ: ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಪೋಷಕರೇ ಆದರ್ಶವಾಗಬೇಕು ಮಕ್ಕಳಿಗೆ ಇನ್ನೊಬ್ಬರ ಆದರ್ಶತೆಯನ್ನು ತಿಳಿಯಪಡಿಸುವ ಬದಲು ನಾವೇ ಆದರ್ಶಯುತವಾಗಿ ಜೀವನ ನಡೆಸಿದಾಗ ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ ಅವಾಗ ಮಕ್ಕಳ ಬದುಕು ಹಸನಾಗಲು ಸಾಧ್ಯ ಈ ಬಗ್ಗೆ ಹೆತ್ತವರು ಚಿಂತನೆ ಮಾಡಬೇಕಾಗಿದೆ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ-ಪಡುಕುತ್ಯಾರು ಇಲ್ಲಿ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಹೇಳಿದರು.


ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಫೆ.೮ ರಂದು ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ರಜತ ಸಂಭ್ರಮ ಹಾಗೂ ಸಾಮೂಹಿಕ ಬ್ರಹ್ಮೋಪದೇಶ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಸಾಮೂಹಿಕ ಕಾರ್ಯಕ್ರಮಗಳಿಂದ ಆರ್ಥಿಕ ಹೊರೆ ತಗ್ಗಿಸುವುದರೊಂದಿಗೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಆದರೆ ಹೆತ್ತವರು ಹುಟ್ಟಿದ ಮಗನಿಗೆ ಉಪನಯನ ಸಂಸ್ಕರ ನೀಡುವ ಜವಾಬ್ದಾರಿಯನ್ನು ಮರೆಯಬಾರದು. ಅದಕ್ಕಾಗಿ ಆರ್ಥಿಕ ಕ್ರೋಢಿಕರಣ ಮಾಡುವ ಚಿಂತನೆ ಹೆತ್ತವರಲ್ಲಿ ಬಂದಾಗ ಸಮಾಜ ಅಭಿವೃದ್ಧಿಗೊಳ್ಳಲುತ್ತದೆ ಎಂದರು. ಚಿನ್ನ ಬೆಳ್ಳಿ ಕೆಲಸಗಾರರ ಸಂಕಷ್ಟದ ಬಗ್ಗೆ ತಿಳಿಸಿದ ಅವರು ತಮ್ಮ ವೃತ್ತಿಯಲ್ಲಿ ಆಧುನೀಕತೆಯನ್ನು ಉಪಯೋಗಿಸಿಕಂಡಾಗ ಮಾತ್ರ ಉದ್ಯೋಗದಲ್ಲಿ ಬೆಳೆಯಲು ಸಾಧ್ಯ. ಸಮಾಜದಲ್ಲಿ, ಸಂಘ ಸಂಸ್ಥೆಗಳಲ್ಲಿ ಧನಾತ್ಮಕ ಋಣತ್ಮಕವಾಗಿ ಮಾತನಾಡುವವರು ಸರ್ವೇ ಸಾಮಾನ್ಯ ಅದನ್ನು ಮೆಟ್ಟಿ ನಿಂತು ನಾವು ಕಾರ್ಯಪ್ರವೃತ್ತರಾದಗ ಯಶಸ್ಸು ಕಂಡಿತಾ ಸಾಧ್ಯ. ಋಣತ್ಮಕವಾಗಿ ಮಾತನಾಡುವವರು ಇದ್ದಲ್ಲಿ ಮಾತ್ರ ನಾವು ಬೆಳೆಯಬಹುದು ನಮ್ಮನ್ನು ಹೊಗಳುವವರು, ಪ್ರೀತಿಸುವವರು, ಆತ್ಮೀಯತೆಯಿಂದ ನೊಡಿಕೊಳ್ಳುವರಿಂದ ನಾವು ಸುಖವಾಗಿ ಇರಬಹುದು ಆದರೆ ನಮ್ಮನ್ನು ಟೀಕಿಸುವವರು, ತೇಗುಳುವವರು ಮಾತ್ರ ನಮ್ಮನ್ನು ಬೆಳೆಸುತ್ತಾರೆ ಎಂದರು. ರಾಜಕೀಯವಗಿ ನಾವು ಯಾವುದೇ ಪಕ್ಷದ ಬ್ರ್ಯಾಂಡ್ ಆಗಬಾರದು ಹಾಗೆ ಆದಲ್ಲಿ ಅವರು ನಮ್ಮನ್ನು ನಿರ್ಲಕ್ಷೀಸುತ್ತಾರೆ ಯಾವುದೇ ಪಕ್ಷಕ್ಕೆ ಸೀಮಿತವಾಗಿರದೆ ಸಹಕಾರ ನೀಡುವ ಪಕ್ಷದೊಂದಿಗೆ ನಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಂ. ರಮೇಶ್ ಆಚಾರ್ಯ ವಹಿಸಿ ಸಹಕರಿಸಿದ ಸಮಸ್ತರಿಗೂ ಕೃತಜ್ಙತೆಗಳನ್ನು ಸಲ್ಲಿಸದರು.

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಬೆಂಗಳೂರು ಇದರ ಅಧ್ಯಕ್ಷರಾದ ಸುಜ್ಞಾನಮೂರ್ತಿ ಪಿ., ಕುಂದಾಪುರ ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ್ ಶಿಲ್ಪಿ ಶ್ರೀ ರಾಮಚಂದ್ರ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ.. ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಸ್.ಆರ್. ಹರೀಶ್ ಆಚಾರ್ಯ, ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ವಿ.ಬಿ.ಎಸ್. ಸಭಾ, ಪೆರ್ವಾಜೆ, ಕಾರ್ಕಳ ಇದರ ಅಧ್ಯಕ್ಷ ಬಿ. ಪ್ರಕಾಶ್ ಆಚಾರ್ಯ, ಶೇಖರ ಆಚಾರ್ಯ, ಮುಂಬೈ, ಉಷಾ ಜ್ಯುವೆಲ್ಲರ್ಸ್‌ನ ಮಾಲಕರಾದ ಅಮಿತ್, ದ.ಕ. ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕೆ. ಎಲ್. ಹರೀಶ್, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಜೊತೆ ಮೊಕ್ತೇಸರ್ ಪಿ. ರವಿ ಆಚಾರ್ಯ ಪೆರ್ವಾಜೆ, ಸುರೇಶ್ ಆಚಾರ್ಯ ನಿಟ್ಟೆ, ಕುಂದಾಪುರ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಬಿ. ಕುಶ ಕುಮಾರ್, ಕಾರ್ಕಳ ಕರ್ನಾಟಕ ಜ್ಯುವೆಲ್ಲರ್ಸ್‌ನ ಹರ್ಷವರ್ಧನ ಆಚಾರ್ಯ, ಚಿನ್ನ ಬೆಳ್ಳಿ ಕೆಲಸಗಾರರ ಹಿತರಕ್ಷಣಾ ವೇದಿಕೆ ಮೂಡುಬಿದಿರೆ ಇದರ ಅಧ್ಯಕ್ಷರಾದ ನವೀನ್ ಆಚಾರ್ಯ, ಕೆ. ಕರುಣಾಕರ ಆಚಾರ್ಯ ಸಾಲ್ಮರ, ಕಾರ್ಕಳ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಮಾಜಿ ಅಧ್ಯಕ್ಷ ಕೆ. ಕಿಶೋರ್ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೋಹ ಶಿಲ್ಪ ದಾಮೋದರ ಆಚಾರ್ಯ ಬೈಲೂರು, ಸ್ವರ್ಣ ಶಿಲ್ಪ ಶ್ಯಾಮರಾಯ ಆಚಾರ್ಯ ಜಾರ್ಕಳ, ಕಾಷ್ಠ ಶಿಲ್ಪ ಪದ್ಮನಾಭ ಆಚಾರ್ಯ ಸಾಣೂರು, ಶಿಲಾ ಶಿಲ್ಪ ಪ್ರಕಾಶ ಆಚಾರ್ಯ ಕುಕ್ಕುಂದೂರು, ಎರಕ ಶಿಲ್ಪ ಪ್ರಕಾಶ ಆಚಾರ್ಯ ಆನೆಕೆರೆ, ರಂಗೋಲಿ ಕಲಾವಿದರಾದ ಸೂರ್ಯ ಪುರೋಹಿತ್ ಕಾರ್ಕಳ, ಪೆನ್ಸಿಲ್ ಲೆಡ್ ಸೂಕ್ಷ್ಮ ಕಲಾವಿದ ಗಿನ್ನೆಸ್ ವಿಶ್ವದಾಖಲೆ ಪಡೆದ ಸುರೇಂದ್ರ ಆಚಾರ್ಯ ನೂರಾಳ್‌ಬೆಟ್ಟು, ಸಮಾಜ ಸೇವೆಗಾಗಿ ಪದ್ಮನಾಭ ಆಚಾರ್ಯ ಪೆರ್ವಾಜೆ, ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಅನುಶ್ರೀ ರಿಷಬ್ ಆಚಾರ್ಯ ನಿಟ್ಟೆ, ಕು| ಲಾವಣ್ಯ ಯು.ಕೆ., ಇವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಗೌರವ ಸಲಹೆಗಾರರಾದ ಕೆ. ಸುಧಾಕರ ಆಚಾರ್ಯ ಸ್ವಾಗತಿಸಿದರು, ಕೆ ರತ್ನಾಕರ ಆಚಾರ್ಯ ಕಟ್ಟಿಮಾರ್ ಪ್ರಾಸ್ತವನೆಗೈದರು. ಶಿಕ್ಷಕಿ ಗೀತಾಚಂದ್ರ ಆಚಾರ್ಯ ಮತ್ತು ಶಿಕ್ಷಕರಾದ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ಆಚಾರ್ಯ ವಂದಿಸಿದರು.

ಸಮಾಜದ ಸಂಘ ಸಂಸ್ಥೆಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಬ್ರಾಹ್ಮಿ ಯಕ್ಷಕಲಾವೃಂದ ಹೆನ್ನಾಬೈಲ್ ಕುಂದಾಪುರ ಹಾಗೂ ದಕ್ಷಿಣೋತ್ತರ ಜಿಲ್ಲೆಯ ಅತಿಥಿ ಕಲಾವಿದರಿಂದ ರಾಜಾ ರುದ್ರಕೋಪ ಯಕ್ಷಗಾನ ಪ್ರದರ್ಶನಗೊಂಡಿತು.

 

 

Related posts

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಶ್ರೀರಾಮ ತಾರಕ ಜಪಯಜ್ಞ

Madhyama Bimba

ಗಾಂಧಿ ಜಯಂತಿ ಪ್ರಯುಕ್ತ ಕೆಕೆಎಂಪಿಯಿಂದ ಪ್ರಯಾಣಿಕರ ತಂಗುದಾಣ ಸ್ವಚ್ಛತಾ ಕಾರ್ಯಕ್ರಮ

Madhyama Bimba

ಕಾರ್ಕಳ ಸರಕಾರಿ ಪಾಲಿಟೆಕ್ನಿಕ್ ರೋಟ್ರಾಕ್ಟ್ ಕ್ಲಬ್ ಪದಗ್ರಹಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More