Blog

ಕಾರ್ಕಳದಲ್ಲಿ ಸರ್ವಜ್ಞ ಜಯಂತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ ಕಾರ್ಕಳ ಇದರ ಆಶ್ರಯದಲ್ಲಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಪ್ರದೀಪ್ ರವರು ವಹಿಸಿದ್ದರು.

ಬಾಲಕಿ ಮನಸ್ವಿ ಕುಲಾಲ್ ಈ ಸಂದರ್ಭದಲ್ಲಿ ಸರ್ವಜ್ಞರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸಮಾಜದಲ್ಲಿ ಗತಿಸಿ ಹೋದ ನೂರಾರು ಮಹನೀಯರು ಸಮಾಜದಲ್ಲಿ ಮಾಡಿದ ಕ್ರಾಂತಿ ಎಲ್ಲರಿಗೂ ಆದರ್ಶ ಪ್ರಾಯವಾದುದು.

ಬಹಳಷ್ಟು ಸಂಕಷ್ಟಗಳಲ್ಲಿ, ದೌರ್ಜನ್ಯಗಳಲ್ಲಿ ಮಿಂದೆದ್ದವರಿಂದ ಮಾತ್ರ ಸಮಾಜದ ಸುಧಾರಣೆ ಆಗಬಲ್ಲುದು ಎಂದು ಮನಸ್ವಿ ಕುಲಾಲ್ ಹೇಳಿದರು.

ಕಾರ್ಕಳ ಕುಲಾಲ ಸಂಘದ ಅಧ್ಯಕ್ಷರಾದ ಹರೀಶ್ಚಂದ್ರ ಕುಲಾಲ್ ಮಾತನಾಡಿ ಸಮಾಜದಲ್ಲಿ ಜಾತೀಯತೆ, ಮೂಡ ನಂಬಿಕೆಯನ್ನು ತೊಡೆದು ಹಾಕುವಲ್ಲಿ ಕವಿ ಸರ್ವಜ್ಞರು ಮಾಡಿದ್ದಾರೆ ಎಂದು ಹೇಳಿದರು.

ಕಾರ್ಕಳದಲ್ಲಿ ಕೂಡಾ ಸರ್ವಜ್ಞ ಮೂರ್ತಿಯನ್ನು ನಿರ್ಮಾಣ ಮಾಡಿದ್ದರಿಂದಾಗಿ ಸರ್ವಜ್ಞರ ಬಗ್ಗೆ ಎಲ್ಲರೂ ತಿಳಿದು ಕೊಳ್ಳುವoತಾಯಿತು ಎಂದರು.

ತಹಸೀಲ್ದಾರ್ ರಾದ ಪ್ರದೀಪ್ ರವರು ಮಾತನಾಡಿ ತ್ರಿಪದಿ ಬ್ರಹ್ಮ ಎಂದೇ ಸರ್ವಜ್ಞರು ಬಣ್ಣಿಸಲ್ಪಟ್ಟಿದ್ದಾರೆ ಎಂದು ಹೇಳಿದರು.

ಬದುಕು ಹಾಗೂ ಸಾಮಾಜಿಕವಾದ ಎಲ್ಲಾ ವಿಚಾರಗಳನ್ನು ಕೂಡಾ ವಚನಗಳ ಮೂಲಕ ತಿಳಿಸ ಹೊರಟು ಅಂದಿನ ದಿನಗಳಲ್ಲೇ ಸಮಾಜದ ಸುಧಾರಣೆ ಮಾಡಲು ಪ್ರಯತ್ನ ಮಾಡಿದ ಸರ್ವಜ್ಞರು ಶ್ರೇಷ್ಠ ವ್ಯಕ್ತಿ ಎಂದು ಹೇಳಿದರು.

ರಿಯಾಜ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Related posts

ಕಾರ್ಕಳ ಜೇಸಿಸ್ ಅಧ್ಯಕ್ಷೆ ಶ್ವೇತಾ ಗೆ ಪ್ರಶಸ್ತಿ

Madhyama Bimba

ಬೀದಿಗೆ ಬಂದ ಯಸಳೂರು ಕುಟುಂಬ

Madhyama Bimba

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಎಡ್ವರ್ಡ್ ರೆಬೆಲ್ಲೋ ತಾಕೋಡೆ ಅವರಿಗೆ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More