ಕಾರ್ಕಳ

ಕುಕ್ಕುಂದೂರಿನ ಮೇಲ್ಜಡ್ಡು ನಿವಾಸಿ ಜಯಂತಿ ಆಚಾರ್ಯರ ಮನೆಗೆ ವಿಶ್ವಕರ್ಮ ಸಂಘಟನೆಗಳ ಭೇಟಿ

ಕುಕ್ಕುಂದೂರು ಮೇಲ್ಜಡ್ಡು ನಿವಾಸಿಗಳಾದ ಜಯಂತಿ ಆಚಾರ್ಯರ ಮನೆಗೆ ವಿಶ್ವಕರ್ಮ ಸಮಾಜದ ವಿವಿಧ ಸಂಘಟನೆಯವರು ಮಾ. ೧೪ರಂದು ಭೇಟಿ ನೀಡಿ ಸಮಸ್ಯೆಗೆ ಬಗ್ಗೆ ಚರ್ಚಿಸಿ ಕುಟುಂಬಕ್ಕೆ ಧೈರ್ಯ ತುಂಬಿದರು.


ಜಯಂತಿ ಆಚಾರ್ಯ ಹಾಗೂ ಗುಲಾಬಿ ಮೂಲ್ಯ ಮನೆಗಳಿಗೆ ಭೇಟಿ ನೀಡಿದ ವಿಶ್ವಕರ್ಮ ಸಮಾಜ ಬಾಂಧವರು ವಾಸ್ತವವನ್ನು ಅರಿತು ಇವರಿಗೆ ಹಕ್ಕುಪತ್ರ ನೀಡುವಂತೆ ತಹಶೀಲ್ದಾರರಿಗೆ ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಿದರು. ಅಲ್ಲದೆ ವಿಶ್ವಕರ್ಮ ಕುಟುಂಬದೊಂದಿಗೆ ಸಂಘಟನೆಯು ಸದಾ ಸಹಕಾರ ನೀಡುವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ, ಜೊತೆ ಮೊಕ್ತೇಸರರಾದ ರವಿ ಪಿ. ಆಚಾರ್ಯ, ವಿಶ್ವಕರ್ಮ ಫೈನಾನ್ಸ್ ಕಾರ್ಪೋರೇಶನ್ ಅಧ್ಯಕ್ಷರಾದ ಸುಧಾಕರ ಆಚಾರ್ಯ ಸಾಲ್ಮರ, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಮಾಜಿ ಮೊಕ್ತೇಸರರಾದ ಬಿ. ಸತೀಶ್ ಆಚಾರ್ಯ, ರತ್ನಾಕರ ಆಚಾರ್ಯ ಕಟ್ಟೆಮಾರ್, ನಿವೃತ್ತ ಪ್ರಾಂಶುಪಾಲರಾದ ವಸಂತ ಆಚಾರ್ಯ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ರಮೇಶ್ ಆಚಾರ್ಯ, ಕಾರ್ಯದರ್ಶಿ ಸಂತೋಷ್ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಅಶೋಕ್ ಆಚಾರ್ಯ ಅಂಡಾರು, ಕ್ರೀಡಾ ಕಾರ್ಯದರ್ಶಿ ಅರುಣ್ ಆಚಾರ್ಯ, ಜೊತೆ ಕಾರ್ಯದರ್ಶಿ ದಿವಾಕರ ಆಚಾರ್ಯ, ನಿಖಿಲ್, ಪ್ರದೀಪ್, ವಿಶ್ವನಾಥ ಆಚಾರ್ಯ, ಪುರಂದರ ಆಚಾರ್ಯ, ರಮೇಶ್ ಆಚಾರ್ಯ, ವಿಜಯ ಆಚಾರ್ಯ, ಗಿರೀಶ್ ಆಚಾರ್ಯ, ಮೌನೇಶ್ ಮತ್ತಿತರರು ಉಪಸ್ಥಿತರಿದ್ದರು.

Related posts

  ಮುಂಡ್ಕೂರು ಪೊಸ್ರಾಲುನಲ್ಲಿ ಮಾರ್ಚ್ 18ರಂದು ಒಬ್ಬರಿಗೆ ಹಲ್ಲೆ ದೂರು ದಾಖಲು. ಮಾರ್ಚ್ 19ರಂದು ಅದೇ ಪ್ರಕರಣ ಇನ್ನೊಂದು ಕೇಸು ದಾಖಲು

Madhyama Bimba

ಹೆಬ್ರಿ: ಎದೆನೋವಿನಿಂದ ವ್ಯಕ್ತಿ ಮೃತ್ಯು

Madhyama Bimba

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ: ರೂ.1200 ಕೋಟಿ ವ್ಯವಹಾರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More