ಕಾರ್ಕಳ

ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ- ರಕ್ತದಾನ ಶಿಬಿರ

ಕಾರ್ಕಳ:ರಕ್ತದಾನವನ್ನು ಮಾಡುವುದರಿಂದ ರಕ್ತದಾನಿಯು ಶ್ರೇಷ್ಠ ವ್ಯಕ್ತಿಯಾಗುತ್ತಾನೆ. ಇದರಿಂದ ಆತನ ಆರೋಗ್ಯವು ವೃದ್ಧಿಯಾಗುತ್ತದೆ ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕಾರ್ಕಳ ಇದರ ಅಧ್ಯಕ್ಷರಾದ ಡಾ. ಕೆ. ಆರ್. ಜೋಶಿಯವರು ಹೇಳಿದರು.

ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಜೋಡುರಸ್ತೆ, ಕುಕ್ಕುಂದೂರು ಇದರ ಬೆಳ್ಳಿ ಹಬ್ಬದ ಸಂಭ್ರಮದ ಪ್ರಯುಕ್ತ ಫ್ರೆಂಡ್ಸ್ ಪವರ್ ಜಿಮ್ ಮತ್ತು ಲೇಡಿಸ್ ಫಿಟೆನೆಸ್ ಹೌಸ್ ಜೋಡುರಸ್ತೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜೋಡುರಸ್ತೆ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗ ಅಜ್ಜರ ಕಾಡು, ಉಡುಪಿ ಇವರ ಸಹಯೋಗದೊಂದಿಗೆ ಶ್ರೀ ದುರ್ಗಾಪರಮೇಶ್ವರೀ ಸಹಕಾರಿ ಸಂಘದ ಸಭಾಂಗಣದಲ್ಲಿ ಮಾ. 15ರಂದು ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬ ರಕ್ತದಾನಿಯಿಂದ ಮೂರು ಜೀವಗಳನ್ನು ಉಳಿಸಿದಂತಾಗುತ್ತದೆ. ಪುರುಷರು ಪ್ರತಿ 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ವರ್ಷದಲ್ಲಿ ಎರಡು ಸಲ ರಕ್ತದಾನ ಮಾಡಿದರೆ ಉತ್ತಮ. ಇಂತಹ ರಕ್ತದಾನ ಶಿಬಿರಗಳಲ್ಲಿ ಮತ್ತು ತಮ್ಮ ಹುಟ್ಟು ಹಬ್ಬ ದಿನ, ಮದುವೆ ವಾರ್ಷಿಕೋತ್ಸವದ ದಿನ ಅಥವಾ ಇನ್ನಿತರ ತಮ್ಮ ಬದುಕಿನ ಶ್ರೇಷ್ಠ ದಿನದಂದು ರಕ್ತದಾನ ಮಾಡಿ ರಕ್ತದಾನಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವುದರಿಂದ ಇತರರಿಗೆ ಮಾದರಿಯಾಗಲು ಸಾಧ್ಯ ಎಂದರು. ಪ್ರತಿಯೊಬ್ಬನ ದೇಹದಲ್ಲಿ 5 ಲೀಟರ್ ನಷ್ಟು ರಕ್ತವಿದ್ದು ಅದರಲ್ಲಿ ಕೇವಲ 300 ಮಿ.ಲೀ ಮಾತ್ರ ರಕ್ತದ ರಕ್ತವನ್ನು ತೆಗೆಯಲಾಗುತ್ತದೆ ಇದರಿಂದ ಆತನ ಆರೋಗ್ಯದ ಮೇಲೆ ಯಾವುದೇ ತೊಂದರೆ ಉಂಟಾಗದೆ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಆತನ ಆರೋಗ್ಯವು ವೃದ್ಧಿಯಾಗುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ರಾವ್ ವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ವೃಷಭರಾಜ ಕಡಂಬ, ನಿರ್ದೇಶಕರಾದ ಯೋಗೇಶ್ ಸಾಲಿಯಾನ್, ಅಜ್ಜರ ಕಾಡು ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗದ ವೈದ್ಯರಾದ ಓಜಸ್ವಿ ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷರಾದ ಸಂತೋಷ್ ರಾವ್ ಸ್ವಾಗತಿಸಿ, ನಿರ್ದೇಶಕರಾದ ದಿನೇಶ್ ಕುಮಾರ್ ವೈ. ವಂದಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ಪ್ರವೀಣ್ ಶೆಟ್ಟಿ, ಥೈಲ್ಯಾಂಡ್‌ನಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್‌ನಲ್ಲಿ ವಿಶೇಷ ಸಾಧನೆಗೈದ ರಾಜೇಶ್ ಶೆಟ್ಟಿ ಕುಕ್ಕುಂದೂರು, ರಕ್ತದಾನ ಶಿಬಿರದಲ್ಲಿ ವಿಶೇಷ ಪ್ರೋತ್ಸಾಹ ನೀಡಿದ ಜೋಡುರಸ್ತೆ ಫ್ರೆಂಡ್ಸ್ ಪವರ್ ಜಿಮ್ ಮತ್ತು ಲೇಡಿಸ್ ಫಿಟೆನೆಸ್ ಹೌಸ್‌ನ ಪಾಲುದಾರರಾದ ಮಹಮ್ಮದ್ ಆಲಿ ಹಾಗೂ ಯೋಗೀಶ್ ಸಾಲಿಯಾನ್‌ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಶಿಬಿರದಲ್ಲಿ ೧೧೯ ಮಂದಿ ರಕ್ತ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಶುಲ್ಕ ಮರುಪಾವತಿ : ಜ. 30 ರ ವರೆಗೆ ಮಾಹಿತಿ ಅಪ್‌ಡೇಟ್‌ಗೆ ಅವಕಾಶ

Madhyama Bimba

ನೀರೆ ಗ್ರಾಮ ಪಂಚಾಯತ್‌ನಲ್ಲಿ ಸವಲತ್ತು ವಿತರಣಾ ಕಾರ್ಯಕ್ರಮ

Madhyama Bimba

ಹೆಬ್ರಿ ಅಮೃತಭಾರತಿ ವಿದ್ಯಾಲಯದ ಆರು ಸಂಸ್ಕೃತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More