ಮೂಡುಬಿದಿರೆ

  ನಾಳೆ ಮೂಡುಬಿದಿರೆಯಲ್ಲಿ ಪತ್ರಕರ್ತ ರೇಮಂಡ್ ಡಿಕುನಾ ತುಳು ಕೃತಿ ಬಿಡುಗಡೆ

ಮೂಡುಬಿದಿರೆ: ತುಳುಕೂಟ(ರಿ), ಮೂಡುಬಿದಿರೆ,  ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ,
ಪ್ರೆಸ್‌ಕ್ಲಬ್‌, ಮೂಡುಬಿದಿರೆ, ಜೆಸಿಐ ಮೂಡುಬಿದಿರೆ ತ್ರಿಭುವನ್, ಸೀನಿಯ‌ರ್ ಛೇಂಬ‌ರ್ ಇಂಟರ್‌ನ್ಯಾಷನಲ್. ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್, ಮೂಡುಬಿದಿರೆ ಹಾಗೂ ಅಭಿಮಾನಿ ಬಳಗ ತಾಕೊಡೆ ಮತ್ತು ರಿಕ್ಷಾ ಚಾಲಕ – ಮಾಲಕರು, ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತ ರೇಮಂಡ್ ಡಿಕುನಾ ತಾಕೊಡೆ ಅವರ ‘ಬೊಳ್ಳಿಲು’ ತುಳು ಪುಸ್ತಕ ಬಿಡುಗಡೆ ಮೂಡುಬಿದಿರೆಯಲ್ಲಿ ನಡೆಯಲಿದೆ.

ಮೂಡುಬಿದಿರೆ ಸಮಾಜ ಮಂದಿರ ದಲ್ಲಿ ಮಾರ್ಚ್ 22ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10-00ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವಹಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್. ಮೋಹನ್ ಆಳ್ವ ಕೃತಿ ಬಿಡುಗಡೆ ಮಾಡಲಿದ್ದಾರೆ. ಶ್ರೀಮತಿ ಗೀತಾ ಲಕ್ಷ್ಮೀಶ್ ಶೆಟ್ಟಿ ಕೃತಿ ಪರಿಚಯ ನಡೆಸಲಿದ್ದಾರೆ.

ಅಂದು ಬೆಳಿಗ್ಗೆ ಗಂಟೆ 10:00ರಿಂದ 11:00 ರವರೆಗೆ ಕವಿಗೋಷ್ಠಿ ಉದಯೋನ್ಮುಖ ಕವಿಗಳಿಂದ ನಡೆಯಲಿದೆ.
ಗೋಷ್ಠಿಯ ಅಧ್ಯಕ್ಷತೆಯನ್ನು ಸದಾನಂದ ನಾರಾವಿ ವಹಿಸಲಿದ್ದಾರೆ. ಸಾಹಿತ್ಯಾಸಕ್ತ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

Related posts

ಜಿ ಎಲ್ ಆಚಾರ್ಯ ಜ್ಯವೆಲ್ಲರ್ಸ್ ವಿಸಿಟ್ & ವಿನ್ ಸ್ಪರ್ಧೆಯ ಫಲಿತಾಂಶ

Madhyama Bimba

ಮೂಡುಬಿದಿರೆ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Madhyama Bimba

ಡಿಕೆ ಶಿವಕುಮಾರ್ ಹುಟ್ಟು ಹಬ್ಬ ಸಂಭ್ರಮಿಸಿದ ಮೂಡುಬಿದಿರೆ ಕಾಂಗ್ರೆಸ್ಸಿಗರು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More