ಕಾರ್ಕಳಹೆಬ್ರಿ

ಮುದ್ರಾಡಿ ಸೇವಾಸಂಗಮ ಶಿಶುಮಂದಿರದಲ್ಲಿ ಕ್ರೀಡಾಕೂಟ

ಹೆಬ್ರಿ: ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಲು ಕ್ರೀಡೆಗಳು ಅತಿ ಅವಶ್ಯಕ. ನಮ್ಮ ಜೀವನ ಒತ್ತಡದ ಗೂಡಾಗಿದೆ. ಕ್ರೀಡೆಗಳು ನಮ್ಮ ಆತ್ಮ ಸ್ಟೈರ್ಯವನ್ನು, ದೈಹಿಕ ಕ್ಷಮತೆಯನ್ನು ಹೆಚ್ಚಿಸಿ ಆರೋಗ್ಯವನ್ನು ಕಾಪಾಡುತ್ತದೆ. ಸೋಲು, ಗೆಲುವಿನ ಬಗ್ಗೆ ಚಿಂತಿಸದೆ ಖುಷಿಯಿಂದ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಿ. ರಜತಮಹೋತ್ಸವ ಆಚರಣೆಯನ್ನು ನಡೆಸಲಿರುವ ಶಿಶುಮಂದಿರದಲ್ಲಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಸೇವಾ ಸಂಗಮ ಶಿಶು ಮಂದಿರದ ಗೌರವಾಧ್ಯಕ್ಷರಾದ ನಿವೃತ್ತ ಶಿಕ್ಷಕ ಗಣಪತಿ ಪೈ ಹೇಳಿದರು.


ಅವರು ಮುದ್ರಾಡಿ ಸುಬ್ಬಣ್ಣಕಟ್ಟೆ ಸೇವಾಸಂಗಮ ಶಿಶುಮಂದಿರದ ರಜತಮಹೋತ್ಸವ ಅಂಗವಾಗಿ ನಡೆದ ಮಾತೆಯರ, ಪುರುಷರ ಹಾಗೂ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಹೆಬ್ರಿ ಆಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಅಧ್ಯಕ್ಷೆ ಸುನೀತಾ ಹೆಬ್ಬಾರ್, ರಜತ ಮಹೋತ್ಸವ ಸಮಿತಿ ಗೌರವ ಸಲಹೆಗಾರರಾದ ಸಂತೋಷ್ ಕುಮಾರ್ ಶೆಟ್ಟಿ ಪಾಲ್ಗೊಂಡು ಶುಭ ಹಾರೈಸಿದರು.

ಸಮಿತಿಯ ಉಪಾಧ್ಯಕ್ಷರಾದ ಸುಲತಾ ಗಂಗಾಧರ ಹೆಗ್ಡೆ, ಸಮಿತಿ ಜೊತೆ ಕಾರ್ಯದರ್ಶಿ ಅನುಶ್ರೀ ಮಲ್ಯ, ಮಾತಾಜಿ ಸುಮತಿ, ವ್ಯವಸ್ಥಾಪನ ಸಮಿತಿ ಹಾಗೂ ರಜತಮಹೋತ್ಸವ ಸಮಿತಿ ಪದಾಧಿಕಾರಿಗಳು, ಮಾತೆಯರು, ಬಾಲಗೋಕುಲ ಮಕ್ಕಳು ಉಪಸ್ಥಿತರಿದ್ದರು.

ಶಿಶು ಮಂದಿರದ ವ್ಯವಸ್ಥಾಪಕಿ ಶಿಲ್ಪಾ ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಶಿಶುಮಂದಿರದ ಸಂಚಾಲಕರಾದ ಶ್ರೀಧರ ನಾಯಕ್ ಸ್ವಾಗತಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಸಮಿತಿ ಜತೆ ಕಾರ್ಯದರ್ಶಿ ಅಶ್ವಿನಿ ಶೆಟ್ಟಿಗಾರ್ ವಂದಿಸಿದರು.

Related posts

ಪರಶುರಾಮ ಪ್ರತಿಮೆಯ ಸೊಂಟದ ಮೇಲ್ಬಾಗದ ಕಳ್ಳತನವೇ ಉಳಿದ ಬಿಡಿಭಾಗಗಳ ಕಳ್ಳತನಕ್ಕೆ ಪ್ರೇರಣೆ: ಈ ದುಸ್ಥಿತಿಗೆ ಶಾಸಕ ಸುನೀಲ್ ಕುಮಾರ್ ನೇರ ಹೊಣೆ- ಉದಯ ಶೆಟ್ಟಿ ಮುನಿಯಾಲು

Madhyama Bimba

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಟ್ಟೆಮಕ್ಕಿ ಶಂಕರನಾರಾಯಣ- ಮೇ.13ರಿಂದ 14: ಶ್ರೀ ಬ್ರಹ್ಮಲಿಂಗೇಶ್ವರ ದೇವರ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಪುನಃ ಪ್ರತಿಷ್ಠಾ ಮತ್ತು ಬ್ರಹ್ಮಕಲಶೋತ್ಸವ

Madhyama Bimba

ಹೆಬ್ರಿ ಶ್ರೀಅನಂತ ಪದ್ಮನಾಭ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ  ಅಧ್ಯಕ್ಷರಾಗಿ ಕೆ.ರಾಘವೇಂದ್ರ ಆಚಾರ್ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More