ಮೂಡುಬಿದಿರೆ

ಪ್ರಸಾದ್ ನೇತ್ರಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ- ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪೋಸ್ಟರ್ಸ್ ಸ್ಪರ್ಧೆ

ಮೂಡುಬಿದಿರೆ: ಜೈನ್ ಪೇಟೆಯ ಫಾರ್ಚೂನ್ ಹೈವೇ ಬಿಲ್ಡಿಂಗ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಮಾರ್ಚ್ 26 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ವರ್ಷದ ದಿನಾಚರಣೆಯನ್ನು “ಆಶಾ ಕಿ ಕಿರಣ್” ಎಂಬ ಶೀರ್ಷಿಕೆಯಡಿ ಆಚರಿಸಲಾಗಿದ್ದು, ಸಮಾಜದ ಮುಂಚೂಣಿ ಆರೋಗ್ಯ ಹೋರಾಟಗಾರರಾದ ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ನೇತ್ರ ತಜ್ಞರು ಡಾ! ಮಾಲಿನಿ ಬಂಗೇರ ಮತ್ತು ಡಾ ಸ್ಮೃತಿ ಅವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಕಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕಣ್ಣಿನ ವೈದ್ಯರಾದ ಡಾ. ಮಾಲಿನಿ ಬಂಗೇರ.
ಮೂಡುಬಿದಿರೆಯ ಮಾವೇದಾಸ್ ಫುಡ್ಸ್ ಅಂಡ್ ಸೀರಿಯಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ನಿರ್ದೇಶಕಿ ಶ್ರೀಮತಿ ಅನುಷಾ ಪ್ರಜ್ವಲ್ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕುಡ್ಲು ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ರಶ್ಮಿ ಕೃಷ್ಣ ಪ್ರಸಾದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪೋಸ್ಟರ್ ಸ್ಪರ್ಧೆ:
ಮಹಿಳಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ “ಮಹಿಳೆಯರ ಆರೋಗ್ಯ” ಎಂಬ ವಿಷಯದ ಮೇಲೆ ಪೋಸ್ಟರ್ ರಚನಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು 13 ಕಾಲೇಜುಗಳಿಂದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪ್ರಸಾದ್ ನೇತ್ರಾಲಯದ ನಿರ್ದೇಶಕಿ ಡಾ. ಸ್ಮೃತಿ, ನಿರ್ದೇಶಕರಾದ ಡಾ. ವಿಕ್ರಮ್ ಜೈನ್ ಮತ್ತು ಡಾ. ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಹಿರಿಯ ನೇತ್ರಪ್ರಜ್ಞ ಡಾ ಸಿಬಿನ ಗಿರೀಶ್, ಆಡಳಿತಾಧಿಕಾರಿ ಮಾಧವ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ದೀಕ್ಷಾ ವಂದಿಸಿದರು.

Related posts

ಎಂಸಿಎಸ್ ಸೊಸೈಟಿ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ.ರಿಗೆ ಸಮಾಜ ಮಂದಿರ ಪುರಸ್ಕಾರ ಪ್ರದಾನ- ಪಿ.ಎಲ್. ಧರ್ಮ, ಸಂದೇಶ್ ಪಿ.ಜಿ.ಯವರಿಗೆ ಸನ್ಮಾನ

Madhyama Bimba

 ಮಹಿಳೆ ನಾಪತ್ತೆ, ಪೊಲೀಸ್ ಸಂಪರ್ಕಿಸಿ

Madhyama Bimba

ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಸತತ ಎರಡನೇ ವರ್ಷವೂ ಉದ್ಯೋಗ ನೇಮಕಾತಿಯಲ್ಲಿ ಶೇ. 100ರ ಸಾಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More