ಕಾರ್ಕಳಹೆಬ್ರಿ

ಅಜೆಕಾರು: ವ್ಯಕ್ತಿಯ ಮೇಲೆ ಗುಂಪೊಂದು ಹಲ್ಲೆ

ಅಜೆಕಾರು: ವ್ಯಕ್ತಿಯೋರ್ವರ ಮೇಲೆ 15 ಜನರ ಗುಂಪೊಂದು ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ಮಾಡಿದ ಘಟನೆ ಮಾ. 26ರಂದು ವರದಿಯಾಗಿದೆ.

ಮುಟ್ಲುಪಾಡಿ ನಿವಾಸಿ ಸುದರ್ಶನ ಶೆಟ್ಟಿ ಹಾಗೂ ಆಕಾಶ ಹಲ್ಲೆಗೊಳಗಾದವರು.

ಸುದರ್ಶನ ಶೆಟ್ಟಿಯವರು ಕೋಳಿ ಸಾಕಾಣಿಕೆ ಮಾಡಿಕೊಂಡಿದ್ದು, ಮಾ. 26ರಂದು ರಾತ್ರಿ ಸಮಯ ಒಂದು ಆಲ್ಟೋ ಹಾಗೂ ಬಿಳಿ ಬಣ್ಣದ ಕಾರು ಮತ್ತು 4ಬೈಕ್ ಗಳಲ್ಲಿ ಹರೀಶ, ಸುದೀರ, ದುರ್ಗಾ, ಗುರುದೀಶ, ಮತ್ತು ಪ್ರತಾಪ ಒಟ್ಟು ಸುಮಾರು 15 ಜನರ ಗುಂಪೊಂದು ಸುದರ್ಶನರವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿ, ಬಿಡಿಸಲು ಬಂದ ಆಕಾಶರವರಿಗೆ ಹರೀಶನು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿರುತ್ತಾರೆ.

ಹಲ್ಲೆಗೊಳಗಾದ ಸುದರ್ಶನ ಶೆಟ್ಟಿಯವರು ಹೆಬ್ರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ.
ಈ ಕೃತ್ಯಕ್ಕೆ ಹರೀಶನು ಸುದರ್ಶನರವರಿಗೆ ಕೋಳಿಯ ಹಣ ಕೋಡಲು ಬಾಕಿಯಿರುವುದು ಕಾರಣವಾಗಿರುವುದಾಗಿ ಎಂದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಸುಂದರ ಕೋಟ್ಯಾನ್ ಪಂಜಿಕುಡೇಲು ನಿಧನ

Madhyama Bimba

ಉಡುಪಿ ಪರ್ಯಾಯ ಮೆರವಣಿಗೆಯಲ್ಲಿ ಕೇಸರಿ ದ್ವಜ ಹಾರಿಸದೆ ಕಾಂಗ್ರೆಸ್ ಬಾವುಟ ಪ್ರದರ್ಶಿಸಬೇಕಿತ್ತಾ- ಸುನೀಲ್ ಕುಮಾರ್

Madhyama Bimba

ಪ್ರತಿಭಾ ಕಾರಂಜಿಯಲ್ಲಿ ಎಸ್.ವಿ.ಟಿ ಆಂಗ್ಲ ಮಾಧ್ಯಮ ಶಾಲೆಗೆ ನಾಲ್ಕು ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More