ಮೂಡುಬಿದಿರೆ

ಏಪ್ರಿಲ್ 5ರಂದು ಕೋಟೆಬಾಗಿಲಿನಲ್ಲಿ ಚಿಕಿತ್ಸೆ, ಆಧಾರ್ ನೋಂದಣಿ

ಕೋಟೆಬಾಗಿಲು ಸುಭಾಸ್ ನಗರದಲ್ಲಿ ಏಪ್ರಿಲ್ 5ರಂದು ಉಚಿತ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಆಧಾ‌ರ್ ನೋಂದಣಿ ನಡೆಯಲಿದೆ.

ಜನನಿ ಸೇವಾ ಟ್ರಸ್ಟ್‌ (ರಿ.) ಸುಭಾಸ್ ನಗರ ಮೂಡುಬಿದರೆ ‘ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ.) ಪುತ್ತೂರು ಅಂಚೆ ವಿಭಾಗ, ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದಿರೆ ಆಳ್ವಾಸ್‌ ಆಯುರ್ವೇದ ಆಸ್ಪತ್ರೆ ವಿದ್ಯಾಗಿರಿ ಮೂಡುಬಿದಿರೆ ಆಳ್ವಾಸ್‌ ಕಾಲೇಜ್ ಆಫ್ ಫಿಸಿಯೋಥೆರಪಿ ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ನಡೆಯಲಿದೆ.

ಶಿಬಿರವು ಸಮಯ ಬೆಳಿಗ್ಗೆ 9.00 ರಿಂದ ಸಂಜೆ 3.30ರ ವರೆಗೆ ನಡೆಯಲಿದೆ. ಉಚಿತ ಔಷಧಿ ಸಹಿತವಾಗಿ ಈ ತಜ್ಞ ವೈದ್ಯರ ತಂಡದಿಂದ ತಪಾಸಣೆ, ಚಿಕಿತ್ಸಾಸಲಹೆ ಹಾಗೂ ಸೂಚನೆಗಳನ್ನು ನೀಡಲಾಗುವುದು.

ಸಕ್ಕರೆ ಕಾಯಿಲೆ ಪರಿಶೀಲನೆ, ಹೃದಯ ರೋಗ ತಪಾಸಣೆ, ಚರ್ಮರೋಗ ತಪಾಸಣೆ, ರಕ್ತದೊತ್ತಡ ತಪಾಸಣೆ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಿಂದ ತಪಾಸಣೆ,ಉಚಿತ ಫಿಸಿಯೋಥೆರಪಿ ಚಿಕಿತ್ಸೆಗಳು, ಉಚಿತ ಇ.ಸಿ.ಜಿ. ತಪಾಸಣೆ, ಇ.ಎನ್.ಟಿ. ತಪಾಸಣೆ, ಗಂಟು ಮತ್ತು ಕೀಲು ನೋವು ತಪಾಸಣೆ ಮಧ್ಯಾಹ್ನ ವರೆಗೆ ನಡೆಯಲಿದೆ. ಆಧಾ‌ರ್ ನೋಂದಣಿ ಸಮಯ ಬೆಳಿಗ್ಗೆ 9.00ರಿಂದ ಸಂಜೆ 3.30ರ ವರೆಗೆ ಜರುಗಲಿದ್ದು, ಹೊಸ ಆಧಾ‌ರ್ ನೋಂದಣಿಗೆ ಜನನ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡ್ ಸೇರಿದಂತೆ ಮಗುವಿನ ಜೊತೆ ಪೋಷಕರು ಕಡ್ಡಾಯವಾಗಿ ಬರತಕ್ಕದ್ದು. (ವಿ.ಸೂ.: 18 ವರ್ಷದ ಒಳಗಿನವರಿಗೆ ಮಾತ್ರ ಹೊಸ ಆಧಾರ್ ನೋಂದಣಿ ಲಭ್ಯ)
ಜನ್ಮ ದಿನಾಂಕ ತಿದ್ದುಪಡಿ, ಪಾಸ್‌ಪೋರ್ಟ್, ಜನನ ಪ್ರಮಾಣ ಪತ್ರ, ಎಸ್ ಎಸ್ ಎಲ್ಸಿ ಪ್ರಮಾಣ ಪತ್ರ, ಪಿಂಚಣಿ ಪಾವತಿಯ ಆದೇಶದ ಮೂಲ ಪ್ರತಿ (PPO),ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸೇವಾ ಗುರುತಿನ ಚೀಟಿ ತರಬೇಕಾಗಿದೆ.

ವಿ.ಸೂ: ಎಲ್ಲಾ ದಾಖಲೆಗಳ ಮೂಲ ಪ್ರತಿಯನ್ನು ತರುವುದು ಕಡ್ಡಾಯ
ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ. 9945998807, 9945989925, 8277555134, 9880021926, 9945990449, 8088451726

 

Related posts

 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಕಯ್ಯ ಪೂಜಾರಿ, ಉದ್ಯಮಿ ಸುರೇಶ್ ಪೂಜಾರಿಯವರಿಗೆ ಸನ್ಮಾನ

Madhyama Bimba

ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ಕುಸ್ತಿ ಪಂದ್ಯಾಟ 2024: ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Madhyama Bimba

ಮೂಡುಕೊಣಾಜೆ ಸರಕಾರಿ ಪ್ರೌಢಶಾಲೆ 100 ಶೇ. ಫಲಿತಾಂಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More