Blog

ಮಾರೂರು ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಹೊರೆಕಾಣಿಕೆ ಮೆರವಣಿಗೆಯನ್ನು ಮೂಡುಬಿದಿರೆ ಸ್ವರಾಜ್ಯ ಮೈದಾನದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ ಆಳ್ವ ಉದ್ಘಾಟಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜೀವಂಧರ ಕುಮಾ‌ರ್, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಶಂಭು ಎನ್. ಶೆಟ್ಟಿ, ಆಡಳಿತ ಮೊತ್ತೇಸರ ಹೊಸಂಗಡಿ ಅರಮನೆ ಸಂಪತ್ ಕುಮಾ‌ರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಖಂಡಿಗ ರಾಮದಾಸ ಆಸ್ರಣ್ಣ, ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್‌ ಕೆ. ಶೆಟ್ಟಿ, ಉದ್ಯಮಿ ರಾಘು ಸಿ ಪೂಜಾರಿ, ಶ್ರೀಪತಿ ಉಪಾಧ್ಯಾಯ ಬಡೆಕೋಡಿ, ಸುಧಾಕರ ಶೆಟ್ಟಿ ಮಿತ್ತೊಟ್ಟುಗುತ್ತು, ಕೋಶಾಧಿಕಾರಿ ಶಂಕರ ಎ. ಕೋಟ್ಯಾನ್, ಜತೆ ಕಾರ್ಯದರ್ಶಿ ಸುಶಾಂತ್ ಕರ್ಕೇರಾ, ಸ್ವಾಗತ ಸಮಿತಿ ಅಧ್ಯಕ್ಷ ರಮೇಶ್ ಎಸ್‌. ಶೆಟ್ಟಿ ಸುನಿಲ್ ಶೆಟ್ಟಿ, ಆರ್ಥಿಕ ಸಮಿತಿಯ ಅಶೋಕ್ ಬಿ, ದೇವರಾಜ್ ಸುವರ್ಣ ಪೊಸಲಾಯಿ, ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಕ್ತಾಧಿಗಳು ವಾಹನಗಳಲ್ಲಿ ತಂದಿರುವ ಹೊರೆಕಾಣಿಕೆಗಳನ್ನು ಮೆರವಣಿಗೆಯಲ್ಲಿ ಮುಖ್ಯರಸ್ತೆಯಲ್ಲಿ ಕೊಂಡೊಯ್ಯಲಾಯಿತು.

Related posts

ಶಾಸಕಿ ಭಾಗೀರಥಿ ಮುರುಳ್ಯರ ಮೇಲೆ ಫೇಸ್ಬುಕ್ ನಲ್ಲಿ ಅವಹೇಳನ

Madhyama Bimba

ಪಳ್ಳಿಯಲ್ಲಿ ವಿಷಕಾರಿ ಕೈಗಾರಿಕಾ ಉದ್ಯಮ – ಪ್ರತಿಭಟನೆ

Madhyama Bimba

ನಾನಿಲ್ತಾರು ಸುಂದರ ಮೂಲ್ಯ ಸಂಸ್ಮರಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More