ಕಾರ್ಕಳಹೆಬ್ರಿ

ಶಿವಪುರ ಶ್ರೀಶಂಕರದೇವ ದೇವಸ್ಥಾನದ ಬ್ರಹ್ಮಕಲಶಾಭಿಷೇಕ : ಹೊರೆ ಕಾಣಿಕೆ ಸಮರ್ಪಣೆ – ಧಾರ್ಮಿಕ ಕಾರ್ಯಕ್ಕೆ ಚಾಲನೆ

– ಸುಕುಮಾರ್ ಮುನಿಯಾಲ್
ಹೆಬ್ರಿ : ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ನಡೆಯುವ ಶ್ರೀ ಗಣಪತಿ ದೇವರು ಹಾಗೂ ಶ್ರೀ ಅನ್ನಪೂರ್ಣೇಶ್ವರೀ ದೇವರ ಪುನ:ಪ್ರತಿಷ್ಠಾಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠೆ ಮತ್ತು ಶ್ರೀ ಶಂಕರಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ ಹಾಗೂ ಶ್ರೀಮನ್ಮಹಾರಥೋತ್ಸವದ ಪ್ರಯುಕ್ತ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು.

ಶಿವಪುರ ಗ್ರಾಮದ ವಿವಿಧ ಪ್ರದೇಶಗಳಿಂದ ಭಕ್ತಸಮೂಹ ಮತ್ತು ವಿವಿಧ ಸಂಘಸಂಸ್ಥೆಗಳು ನೀಡಿದ ಹೊರೆ ಕಾಣಿಕೆಯನ್ನು ಶಿವಪುರ ಪೇಟೆಯಿಂದ ವೈಭವದ ಮೆರವಣಿಗೆಯ ಮೂಲಕ ತಂದು ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಮೆರವಣಿಗೆಗೆ ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ಸುನೀಲ್ ಕುಮಾರ್ ಚಾಲನೆ ನೀಡಿ ಶುಭಹಾರೈಸಿದರು.

ಹೊರೆಕಾಣಿಕೆ ಮತ್ತು ಉಗ್ರಾಣ ಸಮಿತಿಯ ಸಂಚಾಲಕರಾದ ಬೈಕಾಡಿ ಮಂಜುನಾಥ ರಾವ್ ಎಲಿಕೋಡು ನೇತ್ರತ್ವದಲ್ಲಿ ಸಮಿತಿಯ ಸರ್ವ ಸದಸ್ಯರು ಹಾಗೂ ವಿವಿಧ ಸಮಿತಿಗಳು ಹೊರೆಕಾಣಿಕೆ ಸಮರ್ಪಣೆಯ ಯಶಸ್ಸಿಗೆ ಶ್ರಮಿಸಿದರು. ಚೆಂಡೆ, ವಿವಿಧ ಮಹಿಳಾ ಭಜನಾ ಮಂಡಳಿಯ ತಂಡಗಳು, ವೇ಼ಷಭೂಷಣಗಳು ಹೊರೆಕಾಣಿಕೆಯ ಮೆರವಣಿಗೆಗೆ ಮೆರುಗು ನೀಡಿದವು.

ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವಾ ಭಟ್, ಕಾರ್ಯಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೂರ್ಸಾಲು ಗೋಕುಲದಾಸ ನಾಯಕ್, ಪೂನಾ ಉದ್ಯಮಿ ಹರೀಶ ಶೆಟ್ಟಿ ಚಿಟ್ಟೆಬೆಟ್ಟು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್, ಮಾಜಿ ಅಧ್ಯಕ್ಷ ಮೂರ್ಸಾಲು ಮೋಹನದಾಸ ನಾಯಕ್, ಸದಸ್ಯರಾದ ಸಂತೋಷ ಕುಮಾರ್ ಶೆಟ್ಟಿ ನಾಯರಕೋಡು, ಕಾಮಗಾರಿ ಸಮಿತಿಯ ಸಂಚಾಲಕ ಶ್ರೀನಿವಾಸ ಹೆಬ್ಬಾರ್ ಶಿವಪುರ, ಆರ್ಥಿಕ ಸಮಿತಿ ಸಂಚಾಲಕ ಸುರೇಶ ಶೆಟ್ಟಿ ಹುಣ್ಸೆಯಡಿ ಶಿವಪುರ, ಚಂದ್ರಶೇಖರ ಶೆಟ್ಟಿ, ಡಾ. ಗುರುಪ್ರಸಾದ್ ಕೊಡಂಚ, ಜಗನ್ನಾಥ ಕುಲಾಲ್ ಶಿವಪುರ, ರಮೇಶ್ ಕುಮಾರ್, ಲಕ್ಷ್ಮೀನಾರಾಯಣ ನಾಯಕ್ ಕನ್ಯಾನ, ಶಿವಪ್ರಸಾದ್ ಅಡಿಗ, ರಮಾನಂದ ಶೆಟ್ಟಿ, ಗಣೇಶ ಹಾಂಡ, ಮಹಾಬಲೇಶ್ವರ ಅಡಿಗ, ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನಾ ಸಮಿತಿ, ವಿವಿಧ ಉಪಸಮಿತಿಯ ಪ್ರಮುಖರು, ಸದಸ್ಯರು,ಗಣ್ಯರು, ಅರ್ಚಕ ವೃಂದ ಸೇರಿದಂತೆ ಭಕ್ತಸಮೂಹ ಸಾಕ್ಷಿಯಾದರು.
……..
ಶಿವಪುರ ಶ್ರೀಶಂಕರ ದೇವ ದೇವಸ್ಥಾನ ಬ್ರಹ್ಮ ಕಲಶಾಭಿಷೇಕ ಧಾರ್ಮಿಕ ಕಾರ್ಯಕ್ಕೆ ಚಾಲನೆ :
ಹೆಬ್ರಿ : ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನದಲ್ಲಿ ಮೇ 6 ರ ತನಕ ನಡೆಯುವ ಬ್ರಹ್ಮ ಕಲಶಾಭಿಷೇಕದ ಧಾರ್ಮಿಕ ಕಾರ್ಯಕ್ಕೆ ಕ್ಷೇತ್ರದ ತಂತ್ರಿವರೇಣ್ಯರಾದ ಹೆರ್ಗ ರಾಘವೇಂದ್ರ ತಂತ್ರಿಯವರ ನೇತ್ರತ್ವದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಋತ್ವಿಜರ ಸ್ವಾಗತ, ಗೇಹಪ್ರತಿಗ್ರಹ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಆಚಾರ್ಯ ವರಣೆ, ಪುಣ್ಯಾಹ ವಾಚನ, ಅರಣಿ ಮಥನ ಪೂರ್ವಕ ಗಣಪತಿಯಾಗ, ಭೂ ಶುದ್ದಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿತು.

 

 

 

Related posts

ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಕಾರ್ಕಳದಲ್ಲಿ ಚಿಲಿಪಿಲಿ-2026

Madhyama Bimba

ಬೆಳ್ಮಣ್ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೋಟೋಗ್ರಾಫಿ ತರಬೇತಿ ಕಾರ್ಯಗಾರ.

Madhyama Bimba

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :ರಜತ ವರ್ಷದ ಲಾಂಛನ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More