ಕಾರ್ಕಳ

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ:  ಜ್ಞಾನಸುಧಾದ 59 ವಿದ್ಯಾರ್ಥಿಗಳಿಗೆ ರಾಜ್ಯಕ್ಕೆ ಅಗ್ರ ಹತ್ತರೊಳಗಿನ ರ್‍ಯಾಂಕ್ -ಮಣಿಪಾಲ ಜ್ಞಾನಸುಧಾದ ಅಶ್ವಿನ್‌ಗೆ ರಾಜ್ಯಕ್ಕೆ ಮೂರನೇ ರ್‍ಯಾಂಕ್ 

ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಶ್ವಿನ್ ವಿ ಶೆಟ್ಟಿ 597 ಅಂಕದೊಂದಿಗೆ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದಿದ್ದಾರೆ.

ಈಗಾಗಲೇ ಪ್ರಕಟಗೊಂಡ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾದ ವೈಷ್ಣವಿ ಕುಲಕರ್ಣಿ, ಚೈತ್ರಿಕಚೌದರಿ ಹಾಗೂ ಉಡುಪಿ ಜ್ಞಾನಸುಧಾದ ಆರ್ನವಿ ವಿಜ್ಞಾನ ವಿಭಾಗದಲ್ಲಿ 597 ಅಂಕಗಳನ್ನು ಪಡೆದಿದ್ದು ಒಟ್ಟು ಜ್ಞಾನಸುಧಾದ ನಾಲ್ಕು ವಿದ್ಯಾರ್ಥಿಗಳು ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದಂತಾಗಿದೆ. ಮರು ಮೌಲ್ಯಮಾಪನದ ಬಳಿಕ ಒಟ್ಟು ಜ್ಞಾನಸುಧಾ 59 ವಿದ್ಯಾರ್ಥಿಗಳು ರಾಜ್ಯಕ್ಕೆ ಅಗ್ರ ಹತ್ತರ ಒಳಗಿನ ರ್‍ಯಾಂಕ್ ಪಡೆದಿದ್ದಾರೆ.

ಕಾರ್ಕಳ ಜ್ಞಾನಸುಧಾ, ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾವು ಶೇ.100 ಫಲಿತಾಂಶವನ್ನು ಪಡೆದಿದ್ದು, ಒಟ್ಟು 966 ವಿದ್ಯಾರ್ಥಿಗಳಲ್ಲಿ 889(92%) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಫಲಿತಾಂಶವನ್ನು ದಾಖಲಿಸಿಕೊಂಡಿದ್ದಾರೆ.

ಅಜೆಕಾರ್ ಪದ್ಮಗೋಪಲ್ ಎಜುಕೇಶನ್ ಟ್ರಸ್ಟ್‌ನ ಮೂರನೇ ಅಂಗ ಸಂಸ್ಥೆಯಾದ ಮಣಿಪಾಲ ಜ್ಞಾನಸುಧಾದಲ್ಲಿಯೂ ರ್‍ಯಾಂಕ್ ಪಡೆದಿರುವುದು ಸಂತಸವಾಗಿದೆ ಎಂದು ಅಜೆಕಾರ್ ಪದ್ಮಗೋಪಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.

 

 

Related posts

ಕುಕ್ಕುಂದೂರಿನ ಪೊಸನೊಟ್ಟಿನಲ್ಲಿರುವ ಕಲ್ಲು ಕಟ್ಟಿಂಗ್ ಫ್ಯಾಕ್ಟರಿಗೆ ಹೋಗುವ ಲಾರಿಯ ಅಬ್ಬರಕ್ಕೆ ಕೊಚ್ಚಿ ಹೋದ ರಸ್ತೆ: ರೊಚ್ಚಿಗೆದ್ದ ಗ್ರಾಮಸ್ಥರು

Madhyama Bimba

ನಾನಿಲ್ತಾರು ದಿ. ಸುಂದರ ಮೂಲ್ಯ ಅಭಿಮಾನಿ ಬಳಗದಿಂದ ಸಂಸ್ಮರಣಾ ಕಾರ್ಯಕ್ರಮ

Madhyama Bimba

ಹೆಬ್ರಿ: ಕಾರಿಗೆ ಪಿಕ್ ಅಫ್ ವಾಹನ ಡಿಕ್ಕಿ- ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More