ಮೂಡುಬಿದಿರೆ

ಪಡುಮಾರ್ನಾಡಿನ ಅಮನಬೆಟ್ಟಿನಲ್ಲಿ ಮಳೆ ಗಾಳಿಗೆ ಅಪಾರ ಹಾನಿ

ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದಲ್ಲಿ ಇಂದು ಸಾಯಂಕಾಲ ಬೀಸಿದ ಗಾಳಿ ಸಹಿತ ಮಳೆಗೆ ಅಮನಬೆಟ್ಟು ಪ್ರದೇಶದಲ್ಲಿ ಮನೆ ಹಾಗೂ ಕೃಷಿ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ. ಗ್ರಾಮ ಅಸ್ರಣ್ಣರಾದ ಅನಂತ ಅಸ್ರಣ್ಣರವರ ಮನೆಯ ತೋಟದಲ್ಲಿ ಅಪಾರ ಪ್ರಮಾಣದ ತೆಂಗು, ಕಂಗು ಗಾಳಿಗೆ ಹಾನಿಗೊಳಗಾಗಿದೆ.

ಪಂಚಾಯತ್ ಮಾಜಿ ಅಧ್ಯಕ್ಷೆ ಸಂಜೀವಿ ಪೂಜಾರಿ ಅವರ ಮನೆಯ ಮಾಡು ಹಾನಿಯಾಗಿದೆ. ಮುರಗೋಳಿ ಪ್ರದೇಶದಲ್ಲಿ ಮರ ಉರುಳಿ ಬಿದ್ದು ವಿದ್ಯುತ್ ಕಂಬ ಹಾನಿಗೊಳಗಾಗಿದೆ.

ಈ ಪರಿಸರದಲ್ಲಿ ಬೇರೆ ಬೇರೆ ಕಡೆ ಕೃಷಿ, ಮನೆ, ಕಟ್ಟಡಗಳು ಹಾನಿಗೊಳಗಾಗಿದೆ.

ಈ ವಿಷಯ ತಿಳಿದ ಪಂಚಾಯತ್ ಮಾಜಿ ಸದಸ್ಯ ರಮೇಶ್ ಶೆಟ್ಟಿಯವರು ಸಂಬಂಧಿತ ಇಲಾಖೆಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ಮಾಹಿತಿ ನೀಡಿದ್ದಾರೆ.

Related posts

ಶಿರ್ತಾಡಿ ಬಿಲ್ಲವ ಸಂಘದಿಂದ ಪೊಲೀಸ್ ದೂರು

Madhyama Bimba

ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಸತತ ಎರಡನೇ ವರ್ಷವೂ ಉದ್ಯೋಗ ನೇಮಕಾತಿಯಲ್ಲಿ ಶೇ. 100ರ ಸಾಧನೆ

Madhyama Bimba

ಮೂಡುಮಾರ್ನಾಡು ಪ್ರೌಢಶಾಲೆಗೆ ಶೇ 100ಫಲಿತಾಂಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More