ಕಾರ್ಕಳ

ನಿಟ್ಟೆ ಬ್ರಹ್ಮಾ ಕುಮಾರಿ ವೃಂದಾವನ  ಧ್ಯಾನ ಕೇಂದ್ರದಲ್ಲಿ  ‘ತಾಯಂದಿರ ದಿನ ‘ ಆಚರಣೆ

ನಿಟ್ಟೆ ಬ್ರಹ್ಮಾ ಕುಮಾರಿ ವೃಂದಾವನ ಧ್ಯಾನ ಕೇಂದ್ರದಲ್ಲಿ ತಾಯಂದಿರ ದಿನ’  ಆಚರಿಸಲಾಯಿತು.
ತಾಯಂದಿರ ಜೊತೆ ಮಕ್ಕಳು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿತು.


ಸಮಾಜದಲ್ಲಿ ತಾಯಂದಿರ ವಿಶೇಷ ಪಾತ್ರ ವನ್ನು ಚರ್ಚಿಸಿ ಮಾತನಾಡಿದ ಧ್ಯಾನ ಕೇಂದ್ರದ ಸಂಚಾಲಕಿ ಬಿ ಕೆ ಯಶೋದಾ, ತಾಯಿಯು ಪ್ರೀತಿಯ ಸಾಕಾರಮೂರ್ತಿ ಮತ್ತು ಜೀವನದ ಮೊದಲ ಗುರು. ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಅತ್ಯಮೂಲ್ಯ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾತೆಯರು ಅಮ್ಮಂದಿರ ಪಾತ್ರವು ಆಧುನಿಕತೆಯ ಜಗತ್ತಿನ ಜೊತೆಗೆ ಹೇಗೆ ಬದಲಾಗುತ್ತಿದೆ ಎಂಬ ಬಗ್ಗೆ ವಿಶ್ಲೇಷಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗಿದ್ದು, ಪಾಲ್ಗೊಂಡಿದ್ದ ಎಲ್ಲ ತಾಯಂದಿರು ಸಕ್ರಿಯವಾಗಿ ಭಾಗಿಯಾಗಿದ್ದರು.

Related posts

ಅಜೆಕಾರು ಗುಡ್ಡೆಅಂಗಡಿ ಶ್ರೀ ಹರಿವಾಯು ಕೃಪಾಕ್ಕೆ ಪೇಜಾವರ ಶ್ರೀ ಭೇಟಿ

Madhyama Bimba

ಪ್ರೋತ್ಸಾಹಧನ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Madhyama Bimba

ಈದು -ನಾರಾವಿ ಪರಸ್ಪರ ಸೇವಾ ಟ್ರಸ್ಟ್ ವತಿಯಿಂದ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಒಂದು ಲಕ್ಷ ರೂಪಾಯಿ ಸಹಾಯ ಧನ ಹಸ್ತಾಂತರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More