ಕಾರ್ಕಳಹೆಬ್ರಿ

ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿರುವ ಕಾರ್ಕಳ ಜೋಡುರಸ್ತೆಯ ಶ್ರೀ ದುರ್ಗಾಪರಮೇಶ್ವರಿ ವಿವಿಧೊದ್ಧೇಶ ಸಹಕಾರಿ ಸಂಘಕ್ಕೆ ರೂ. 52.10 ಲಕ್ಷ ನಿವ್ವಳ ಲಾಭ

ಕಾರ್ಕಳ: ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ತತ್ವದಡಿಯಲ್ಲಿ ಅಸ್ತಿತ್ವಕ್ಕೆ ಬಂದು ಸಹಕಾರ ಮನೋಭಾವದಿಂದಲೇ ಕಾರ್‍ಯಾಚರಿಸಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿರುವ ಕಾರ್ಕಳದ ಪ್ರತಿಷ್ಠಿತ ಶ್ರೀ ದುರ್ಗಾಪಮೇಶ್ವರಿ ವಿವಿಧೋದ್ಧೇಶ ಸಹಕಾರಿ ಸಂಘವು ಆರ್ಥಿಕ ವರ್ಷದಲ್ಲಿ ರೂ 52.10ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಂತೋಷ್ ರಾವ್ ತಿಳಿಸಿದ್ದಾರೆ.

ಸಂಘವು 2025-26 ನೇ ಆರ್ಥಿಕ ಸಾಲಿನಲ್ಲಿ 218.26 ಕೋಟಿ ವ್ಯವಹಾರ ನಡೆಸಿ, ವಾರ್ಷಿಕ ಅಂತ್ಯಕ್ಕೆ ಸಂಘವು 36.69 ಲಕ್ಷ ಪಾಲು ಬಂಡವಾಳ ಹೊಂದಿದ್ದು, 48.10 ಕೋಟಿ ಠೇವಣಿ ಸಂಗ್ರಹ ವಾಗಿದ್ದು, 38.48 ಕೋಟಿ ಸಾಲ ವಿತರಿಸಿದ್ದು, 54.09 ಕೋಟಿ ದುಡಿಮೆ ಬಂಡವಾಳವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.


ಬೆಳೆಯುತ್ತಿರುವ ಜೋಡುರಸ್ತೆಯ ಕೇಂದ್ರ ಭಾಗದಲ್ಲಿ ತನ್ನ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಚೇರಿಯನ್ನು ಹಾಗೂ ಕೆಳ ಅಂತಸ್ತಿನಲ್ಲಿ ಮುಖ್ಯ ಶಾಖೆಯನ್ನು ಹೊಂದಿರುವ ಶ್ರೀ ದುರ್ಗಾಪರಮೇಶ್ವರಿ ಸಹಕಾರಿ ಸಂಘವು ಹೆಬ್ರಿ, ಮುನಿಯಾಲು, ಬಜಗೋಳಿ, ಬೆಳ್ಮಣ್, ಬೈಲೂರು, ಸಾಣೂರು, ಇನ್ನಾಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದರ ಮೂಲಕ ಸಹಕಾರಿಗಳ ವಿಶ್ವಾಸಕ್ಕೆ ಪಾತ್ರವಾಗಿ ಲಾಭಂಶ ಹಾಗೂ ಠೇವಣಿಯನ್ನು ವೃದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆರ್ಥಿಕ ಪ್ರಗತಿ: 2024-2025ನೇ ಸಾಲಿನಲ್ಲಿ 175.33 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ, 60.63 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ. 2024-25ರ ಆರ್ಥಿಕ ವಷಾಂತ್ಯಕ್ಕೆ ಸದಸ್ಯರಿಂದ 33.03ಲಕ್ಷ ರೂ. ಬಂಡವಾಳ ಹೊಂದಿದ್ದು ಒಟ್ಟು 38.45 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. ಸದಸ್ಯರಿಗೆ ಎಲ್ಲಾ ರೀತಿಯ ಸಾಲ ವಿತರಿಸಿದ್ದು, 31.82 ಕೋಟಿ ರೂ. ಸಾಲ (ಹೊರಬಾಕಿ) ನೀಡಿತ್ತು. 3.18ಕೋಟಿ ರೂ. ನಿಧಿಗಳು, 5.50ಕೋಟಿ ರೂ. ಹೂಡಿಕೆಗಳಿದ್ದು, 44.13 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ.

ಠೇವಣಿಗಳು: ಸಂಘವು 2025-26ರ ಆರ್ಥಿಕ ವರ್ಷದಲ್ಲಿ ಸಂಚಯ ಠೇವಣಿ, ನಿರಖು ಠೇವಣಿ, ಮಾಸಿಕ ಠೇವಣಿ, ಭಾರತ್ ವಿಕಾಸ್ ಪತ್ರ, ಚಾಲ್ತಿ ಠೇವಣಿ, ಹನಿದೈನಿಕ ಠೇವಣಿ, ಪಕ್ವತ ಠೇವಣಿ ಇದ್ದು, ಒಟ್ಟು .48 ಕೋಟಿ ಠೇವಣಿ ಸಂಗ್ರಹಿಸಿದೆ. ವರ್ಷದಿಂದ ವರ್ಷಕ್ಕೆ ಠೇವಣಿ ಸಂಗ್ರಹದಲ್ಲೂ ಗಣನೀಯ ಏರಿಕೆ ಕಂಡಿದೆ. ಇದರೊಂದಿಗೆ ಠೇವಣಿದಾರರಿಗೆ ಉತ್ತಮ ಬಡ್ಡಿಯನ್ನು ಸಂಘವು ನೀಡುತ್ತಾ ಬಂದಿದೆ.

ಸಾಲ ಸೌಲಭ್ಯಗಳು: ಸಂಘವು ಸದಸ್ಯರಿಗೆ ಆಸ್ತಿ ಅಡಮಾನ ಸಾಲ, ಚಿನ್ನಾಭರಣ ಸಾಲ, ಇತರ ಉದ್ದೇಶ ಸಾಲ, ವಾಹನ ಸಾಲ, ತುರ್ತು ಸಾಲ, ಭದ್ರತಾ ಸಾಲ, ಠೇವಣಾತಿ ಸಾಲ, ಹನಿದೈನಿಕ ಸಾಲ, ಓವರ್ ಡ್ರಾಫ್ಟ್ ಸಾಲ, ಜಾಮೀನು ಸಾಲ, ಮನೆ ಸಾಲ, ಗ್ರೂಪ್ ಸಾಲಗಳ ಮೂಲಕ ಸಂಘದ ಸದಸ್ಯರಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದು ಇವರಿಗೆ ರೂ 38 ಕೋಟಿ ಸಾಲ ನೀಡಿದೆ.

ಸಾಮಾಜಿಕ ಸೇವೆ: ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 3.50 ಲಕ್ಷದಷ್ಟು ದೇಣಿಗೆಯನ್ನು ನೀಡುವುದರ ಮೂಲಕ ಸಾಮಾಜಿಕ ಚಟುವಟಿಕೆಯಲ್ಲೂ ತನ್ನ ಛಾಪನ್ನು ಮೂಡಿಸಿದೆ. ಕಾರ್ಕಳ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಘಟಕಕ್ಕೆ ದೇಣಿಗೆ ಹಾಗೂ ರೆಫ್ರಿಜರೇಟರ್ ಕೊಡುಗೆ, ಚೇತನ ವಿಶೇಷ ಶಾಲೆಗೆ ರೆಫ್ರಿಜಿರೇಟರ್ ಹಸ್ತಾಂತರ, ದಾಖಲೆ ಸಂಖ್ಯೆಯಲ್ಲಿ ರಕ್ತದಾನ ಶಿಬಿರ, ಸುರಕ್ಷಾ ಸೇವಾ ಆಶ್ರಮಕ್ಕೆ ದಿನಸಿ ಸಾಮಗ್ರಿಗಳ ಪೂರೈಕೆ ಹಾಗೂ ಊಟದ ಬಟ್ಟಲು ಕೊಡುಗೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್ ಇಲ್ಲಿಯ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಸಾಣೂರು ಪ್ರೌಢಶಾಲೆಗೆ ಗುರುತಿನ ಚೀಟಿ ವಿತರಣೆ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದೆ. ಕಾರ್ಕಳ ತಾಲೂಕಿನಾದ್ಯಂತ ದೇವಸ್ಥಾನಗಳ ದೈವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಂಘದ ವತಿಯಿಂದ ದೇಣಿಗೆ ನೀಡುತ್ತಾ ತನ್ನಿಂದಾದ ಸೇವೆಯನ್ನು ನೀಡುತ್ತ ಬಂದಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಜೋಡುರಸ್ತೆ ಇಲ್ಲಿಯ ಮಕ್ಕಳಿಗೆ ಬ್ಯಾಗ್, ಅಯ್ಯಪ್ಪನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಗೂ ಕುಕ್ಕುಂದೂರು ಶ್ರೀ ದುರ್ಗಾ ದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಂಘವನ್ನು ಅಭಿವೃದ್ಧಿಯತ್ತಾ ಸಾಗುವಲ್ಲಿ ಸಹಕರಿಸಿದ ಆಡಳಿತ ಮಂಡಳಿಯ ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ, ಹನಿ ದೈನಿಕ ಸಂಗ್ರಾಹಕರಿಗೆ, ಗ್ರಾಹಕ ಮಿತ್ರರಿಗೆ, ಸಂಘದ ಸದಸ್ಯರಿಗೆ, ಇಲಾಖಾಧಿಕಾರಿಯವರಿಗೆ ಸಂಘದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Related posts

ಕಾರ್ಕಳ: ಅನಾರೋಗ್ಯದಿಂದ ವ್ಯಕ್ತಿ ಮೃತ್ಯು

Madhyama Bimba

ಕಲ್ಲೊಟ್ಟೆ ಯುವಕ ವೃಂದದಿಂದ ಸನ್ಮಾನ

Madhyama Bimba

ಅರ್ಜಿ ಸಲ್ಲಿಕೆ : ಅವಧಿ ವಿಸ್ತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More