ಮೂಡುಬಿದಿರೆ

ಕೇಮಾರು, ಕೊಲ್ಲೂರು ಶಾಖಾ ಮಠಕ್ಕೆ ಸಹಕಾರ: ಸಂಸದ ಬ್ರಿಜೇಶ್ ವಾಗ್ದಾನ

ದಕ್ಷಿಣ ಕನ್ನಡ ಕ್ಷೇತ್ರದ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರು ಮೂಡುಬಿದಿರೆ ತಾಲೂಕಿನ ಕೇಮಾರು ಸಾಂದೀಪನಿ ಸಾಧನಾಶ್ರಮಕ್ಕೆ ಭೇಟಿ ನೀಡಿದರು.

ಪಡುಮಾರ್ನಾಡಿನ ಬನ್ನಡ್ಕ ಸರಣಿ ಅಫಘಾತ ಸ್ಥಳಗಳಿಗೆ ಆದಿತ್ಯವಾರ ಭೇಟಿ ನೀಡಿ, ಅಲ್ಲಿನ ಕುಂದು ಕೊರತೆಗಳ ಪರಾಮರ್ಶೆ ನಡೆಸಿ ಸಾರ್ವಜನಿಕರೊಂದಿಗೆ ಮಾತನಾಡಿದ ನಂತರ ಕೇಮಾರು ಮಠಕ್ಕೆ ಅವರು ಭೇಟಿ ನೀಡಿದರು. ಕೇಮಾರು ಮಠದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಅವರೊಂದಿಗೆ ಕುಶಲೋಪಚಾರ ಮಾತನಾಡಿ ಅವರ ಆಶೀವಾ೯ದ ಪಡೆದರು.

ಕೇಮಾರು ಮತ್ತು ಕೊಲ್ಲೂರು ಶಾಖಾ ಮಠದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ವಾಗ್ದಾನ ನೀಡಿದರು.
ಬ್ರಿಜೇಶ್ ಚೌಟರೊಂದಿಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಸಹಕಾರಿ ಧುರೀಣ ದಯಾನಂದ ಪೈ, ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್, ಪ್. ಕಾಯ೯ದಶಿ೯ ಭರತ್ ಶೆಟ್ಟಿ, ಪಾಲಡ್ಕ ಗ್ರಾ. ಪಂ. ನ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಕೇಮಾರು, ಪ್ರಮುಖರಾದ ಶಶಿಧರ್ ಅಂಚನ್ ಎನಿಕ್ರಿಪಲ್ಲ, ವಿಠ್ಠಲ್ ಮುಲ್ಕಿ, ಸುದಶ೯ನ್ ಆಚಾಯ೯ ಕೇಮಾರು, ಜೀವಂಧರ್ ಶೆಟ್ಟಿಗಾರ್,
ಚಂದ್ರ ಪೂಜಾರಿ, ಶಿವಪ್ರಸಾದ್ ಶೆಟ್ಟಿ, ರಂಜಿತ್ ಕೋಟ್ಯಾನ್, ಹರೀಶ್ ಪೂಜಾರಿ, ಶಾಶ್ವತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Related posts

ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಖೋ-ಖೋ ಪಂದ್ಯಾಟ: ೧೭ನೇ ಬಾರಿಗೆ ಆಳ್ವಾಸ್‌ಗೆ ಅವಳಿ ಪ್ರಶಸ್ತಿ

Madhyama Bimba

‘ಆಳ್ವಾಸ್ ಪದವಿ ಪೂರ್ವ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ’- ಎಸ್.ಎಸ್.ಎಲ್.ಸಿ. ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶ

Madhyama Bimba

ಸಂಜೀವ ಕಾಣಿಯೂರು  ಹೇಳಿಕೆಗೆ  ಮೂಡುಬಿದಿರೆ ಸಂಘ ಖಂಡನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More