ಕಾರ್ಕಳಹೆಬ್ರಿ

ಹೆಬ್ರಿ: ಇಸ್ಪೀಟ್ ಜುಗಾರಿ ಅಡ್ಡಕ್ಕೆ ದಾಳಿ – ಮೂವರು ವಶಕ್ಕೆ – ಹಲವಾರು ಮಂದಿ ಪರಾರಿ

ಹೆಬ್ರಿ: ಹೆಬ್ರಿ ಗ್ರಾಮದ ಹೊಸೂರು ಎಂಬಲ್ಲಿ ಇಸ್ಪೀಟು ಜುಗಾರಿ ಆಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದ ಘಟನೆ ಜೂ. 06ರಂದು ವರದಿಯಾಗಿದೆ.

ಕಾರ್ಕಳ ಉಪ ವಿಭಾಗ ಪೊಲೀಸ್ ಉಪಾಧಿಕ್ಷರಿಗೆ ಬಂದ ಮಾಹಿತಿ ಮೇರೆಗೆ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು ದಾಳಿ ನಡೆಸಿ ಹೊಸೂರು ಎಂಬಲ್ಲಿ ಹಣವನ್ನು ಪಣವಾಗಿ ಇಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ವಿಜೇಶ್, ದಸ್ತಗೀರ್, ರೋಹಿತ್ ಮೂವರನ್ನು ಹಿಡಿದು ವಿಚಾರಿಸಿದಾಗ ಇಸ್ಟೀಟು ಜುಗಾರಿ ಆಟ ನಡೆಸುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

ಈ ಸಂದರ್ಭ ನಿತಿನ್ ಮಂಗಳೂರು, ಪಡು ಮಂಗಳೂರು, ಕಿಶೋರ್ ಪಂಪ್ವೆಲ್, ಮೂಲ್ಕಿ ಸಿದ್ದು ಶೆಟ್ಟಿ, ಮೂಲ್ಕಿ ರಂಗನಾಥ, ಮೂಲ್ಕಿ ರಪೀಕ್, ನಿತಿನ್ ಮಂಗಳೂರು, ನಜೀರ್ ಬೆಳ್ತಂಗಡಿ, ಚೇತನ ಬರ್ಕೆ, ಕಿಶೋರ್ ಪಾಂಗಾಳ, ವಿಜಯ ಶೆಟ್ಟಿ ಕಾರ್ಕಳ, ಮಹೇಶ್ ಜಾರ್ಕಳ, ಮಹಾದೇವ ನಾಯ್ಕ ಭಟ್ಕಳ, ಮೂಲ್ಕಿಯ ಇಮ್ರಾನ್ ಮತ್ತು ಕಾರಿನ ಚಾಲಕ ಹಾಗೂ ಇತರರು ಅಲ್ಲಿಂದ ಪರಾರಿಯಾಗಿರುತ್ತಾರೆ.

ಜೂಜಾಟಕ್ಕೆ ಬಳಸಿದ ನಗದು, ಮೊಬೈಲ್, ಇಸ್ಟೀಟು ಕಾರ್ಡ್‌ಗಳೊಂದಿಗೆ ಆಟಕ್ಕೆ ಉಪಯೋಗಿಸಿದ್ದ ಇನ್ನಿತರ ಪರಿಕರಗಳನ್ನು, ಹಾಗೂ ಕಾರು, ಮೋಟಾರ್ ಸೈಕಲ್, ಸ್ಕೂಟಿ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related posts

ಮೂಡಾ ಸೈಟು ಹಿಂದಿರಿಗಿಸಿರುವುದು ಭಯದ ಶರಣಾಗತಿಯಲ್ಲ: ಬಿಪಿನಚಂದ್ರ ಪಾಲ್ ನಕ್ರೆ

Madhyama Bimba

ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ- ರಕ್ತದಾನ ಶಿಬಿರ

Madhyama Bimba

ಸುಂದರ ಆಚಾರ್ಯ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More