ಕಾರ್ಕಳಹೆಬ್ರಿ

ಕೆರ್ವಾಶೆ ಬಂಗ್ಲೆಗುಡ್ಡೆ ಶಾಲಾ ನಾಯಕ – ಉಪನಾಯಕರ ಆಯ್ಕೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಕೆರ್ವಾಶೆ ಇಲ್ಲಿಯ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ನಾಯಕ ಹಾಗೂ ಉಪನಾಯಕರ ಚುನಾವಣೆಯನ್ನು ಇವಿಎಂ ಮೂಲಕ ಜೂ. 08ರಂದು ನಡೆಯಿತು.

ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಿಸೈಡಿಂಗ್ ಆಫೀಸರ್ ಹಾಗೂ ಪೋಲಿಂಗ್ ಆಫೀಸರ್‌ಗಳಾಗಿ ಕರ್ತವ್ಯ ನಿರ್ವಹಿಸಿದರು. ಮತ ಎಣಿಕೆಯಲ್ಲಿ 5 ನೇ ತರಗತಿಯ ಸೃಶಾನ್ ಎಸ್. ಪೂಜಾರಿ ಅವರು ಅತಿ ಹೆಚ್ಚು ಮತಗಳನ್ನು ಪಡೆದು ಶಾಲಾ ನಾಯಕರಾಗಿ ಆಯ್ಕೆಯಾದರು. ಹಾಗೆಯೇ 4 ನೇ ತರಗತಿಯ ಸಹನ್ ವಿ. ನಾಯಕ್ ಅವರು ಶಾಲಾ ಉಪನಾಯಕರಾಗಿ ಆಯ್ಕೆಯಾದರು.

ಈ ಚುನಾವಣೆಯ ಮೂಲಕ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾನದ ಮಹತ್ವ ಹಾಗೂ ಚುನಾವಣೆ ಹೇಗೆ ನಡೆಯುತ್ತದೆ ಎಂಬುದರ ಕುರಿತು ಸ್ಪಷ್ಟವಾದ ಅರಿವು ಪಡೆದುಕೊಂಡರು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ ಹಾಗೂ ನಾಗರಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು.

ಮುಖ್ಯೋಪಾಧ್ಯಾಯರು ಆಯ್ಕೆಯಾದ ಶಾಲಾ ನಾಯಕ ಹಾಗೂ ಉಪನಾಯಕರನ್ನು ಅಧಿಕೃತವಾಗಿ ಘೋಷಿಸಿ ಅಭಿನಂದಿಸಿದರು.

Related posts

ಪಳ್ಳಿ: ಕಿಶನ್ ಪ್ರಭುರವರಿಗೆ ಆಪ್ತಮಿತ್ರ ಪ್ರಶಸ್ತಿ

Madhyama Bimba

ಹೆಬ್ರಿಯಲ್ಲಿ ಹಣ ಕಳವು- ಪ್ರಕರಣ ದಾಖಲು

Madhyama Bimba

ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ನಲ್ಲಿ ಕ್ಲಬ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More