ಮೂಡುಬಿದಿರೆ

ಬಿರುಗಾಳಿಗೆ ಹಾನಿಗೀಡಾದ ಪತ್ರಕರ್ತ ಜಗದೀಶ್ ಮನೆಯಲ್ಲಿ ಪಾಲಡ್ಕ ಬಿಲ್ಲವ ಸಂಘದಿಂದ ಶ್ರಮದಾನ

ಕಡಂದಲೆ ಗ್ರಾಮದ ಪೂಪಾಡಿಕಲ್ಲು ನಿವಾಸಿ ಹಾಗೂ ಪತ್ರಕರ್ತ ಜಗದೀಶ್ ಪೂಜಾರಿ ಅವರ ಮನೆಗೆ ಬಿರುಗಾಳಿ ಮತ್ತು ಮಳೆಯಿಂದ ಉಂಟಾಗಿದ್ದ ಹಾನಿಯನ್ನು ಕಡಂದಲೆ–ಪಾಲಡ್ಕ ಬಿಲ್ಲವ ಸಂಘದ ವತಿಯಿಂದ ಭಾನುವಾರ ಶ್ರಮದಾನದ ಮೂಲಕ ದುರಸ್ತಿಗೊಳಿಸಲಾಯಿತು.

ಮನೆಯ ಮೇಲ್ಛಾವಣಿ ಸೇರಿದಂತೆ ಹಾನಿಗೊಳಗಾದ ಭಾಗಗಳನ್ನು ಸಂಘದ ಸದಸ್ಯರು ಒಗ್ಗಟ್ಟಿನಿಂದ ದುರಸ್ತಿಗೊಳಿಸಿ ಮಾನವೀಯ ಸೇವೆಯ ಮಾದರಿಯಾದರು. ಮನೆ ದುರಸ್ತಿಗೆ ಅಗತ್ಯವಿದ್ದ ಸಾಮಗ್ರಿಗಳನ್ನು ಸಂಘದ ಅಧ್ಯಕ್ಷ ಲೀಲಾಧರ ಪೂಜಾರಿ ಹಾಗೂ ಶೇಖರ್ ಅಂಚನ್ (ದುಬೈ) ಕೊಡುಗೆಯಾಗಿ ನೀಡಿದರು.

ಸೇವಾದಳದ ಅಧ್ಯಕ್ಷ ಸೀತಾರಾಮ್ ಸಾಲ್ಯಾನ್ ಸೇರಿದಂತೆ ಸೌಜನ್ ಸಾಲ್ಯಾನ್, ಉದಯ ಪೂಜಾರಿ, ಪುಷ್ಪರಾಜ್ ಬಂಗೇರ, ಪ್ರಮೋದ್ ಸಾಲ್ಯಾನ್, ಪವನ್ ಸಾಲ್ಯಾನ್, ನಾರಾಯಣ ಸಾಲ್ಯಾನ್, ಅವಿನಾಶ್ ಸಾಲ್ಯಾನ್, ರಾಜೇಶ್ ಸಾಲ್ಯಾನ್, ಸಂತೋಷ್ ಸನಿಲ್, ಜೀವನ್ ಸನಿಲ್, ತುಕಾರಾಮ್ ಕೆಂಬಾರೆ, ದರ್ಶಿತ್, ಜಾನು, ಜೀತು, ಆರುಷ್ ಬಂಗೇರ ಹಾಗೂ ಸಂತೋಷ್ ಪೂಜಾರಿ ಸೇರಿದಂತೆ ಅನೇಕ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿ ಸೇವಾ ಕಾರ್ಯ ಮೆರೆದರು.

Related posts

ಜೈನ ಕಾಲೇಜಿನ ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರ

Madhyama Bimba

ರೋಟರಿ ಕ್ಲಬ್ ನಿಂದ ಗ್ಲಾಸ್ ಲೋಟ ವಿತರಣೆ

Madhyama Bimba

ನಮ್ಮ ಕಂಬಳ 2025- 26ರ ಪ್ರಶಸ್ತಿ ಪ್ರದಾನ – ಇರುವೈಲ್ ಪಾಣಿಲ ‘ತಾಟೆ ‘ , ಬೋಳದಗುತ್ತು ‘ದೋಣಿ ‘ ಗೆ ಶ್ರೇಷ್ಠ ಕೋಣ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More