ಹೆಬ್ರಿ : ಹೆಬ್ರಿ ತಾಲ್ಲೂಕಿನ ಬೆಳ್ವೆ ಗ್ರಾಮ ಆಡಳಿತಾಧಿಕಾರಿ ಕುಂದಾಪುರ ತಾಲ್ಲೂಕಿನ ಸಿದ್ಧಾಪುರ ಕೆಳಪೇಟೆ ನಿವಾಸಿ ರಮೇಶ್ (57) ಬುಧವಾರ ಅನಾರೋಗ್ಯದಿಂದ ಮೃತರಾದರು.
ಮೃತರಿಗೆ ಪತ್ನಿ ಹಾಗೂ ಮಗಳು ಇದ್ದಾರೆ. ಹೆಬ್ರಿ ತಹಶೀಲ್ಧಾರ್ ಎಸ್.ಎ.ಪ್ರಸಾದ್, ಉಪತಹಶೀಲ್ಧಾರ್ ರಾಘವೇಂದ್ರ ನಾಯ್ಕ್, ಕಂದಾಯ ನೀರಿಕ್ಷಕ ಹಿತೇಶ್ ಯುಬಿ, ತಾಲ್ಲೂಕು ಸರ್ವೆಯರ್ ರವಿರಾಜ್, ಗ್ರಾಮ ಆಡಳಿತಾಧಿಕಾರಿಗಳಾದ ರಾಚಪ್ಪಜಿ, ನವೀನ್ ಕುಮಾರ್ ಸಹಿತ ಕಂದಾಯ ಅಧಿಕಾರಿಗಳು ಅಂತಿಮನಮನ ಸಲ್ಲಿಸಿದರು.