ಹೆಬ್ರಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಚಿತ್ರ ಬಿಡಿಸಿ ಹಸ್ತಾಂತರಿಸಿದ ಪ್ರತಿಭಾವಂತ ಚಿತ್ರಕಲಾವಿದ ಪರೀಕ್ಷಿತ್ ಆಚಾರ್ಯ
ಹೆಬ್ರಿ : ಹೆಬ್ರಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಪ್ರತಿಭಾವಂತ ಚಿತ್ರಕಲಾವಿದ ಪರೀಕ್ಷಿತ್ ಆಚಾರ್ಯ ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಚಿತ್ರವನ್ನು ಬಿಡಿಸಿ ಸಂಸ್ಥೆಯ ೨೬ನೇ ವಾರ್ಷಿಕೋತ್ಸವ ಎಸ್ ಆರ್ ಸೌರಭದಲ್ಲಿ ಶನಿವಾರ ಹಸ್ತಾಂತರಿಸಿದರು.
ಚಿತ್ರ ಕಂಡು ಖುಷಿಗೊಂಡ ಕೋಟ ಶ್ರೀನಿವಾಸ ಪೂಜಾರಿ ಅವರು ನನಗಿಂತ ಚೆನ್ನಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿ ಚಿತ್ರಕಲಾವಿದ ಪರೀಕ್ಷಿತ್ ಆಚಾರ್ಯ ಅವರನ್ನು ಶಾಲು ಹೊದೆಸಿ ಗೌರವಿಸಿದರು. ಪರೀಕ್ಷಿತ್ ಆಚಾರ್ಯ ನಾಲ್ಕೂರು ಗ್ರಾಮದ ಮಾರಾಳಿ ಮಂದಾರ ಆಚಾರ್ಯ ಮತ್ತು ವೀಣಾ ಆಚಾರ್ಯ ದಂಪತಿಯ ಸುಪುತ್ರ. ಹೆಬ್ರಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಚ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ, ಹೆಬ್ರಿ ತಹಶೀಲ್ಧಾರ್ ಪ್ರಸಾದ್ ಎಸ್ ಎ ಉಪಸ್ಥಿತರಿದ್ದರು.