ಕಾರ್ಕಳ : ಪರಪು ಗುತ್ತು ಕರೆಯ ಪಿಲಿಚಂಡಿ, ಬೊಬ್ಬರ್ಯ, ನೀಚ ಮತ್ತು ಗುಳಿಗ ದೈವಸ್ಥಾನದ ಜೀರ್ಣೋದ್ಧಾರದ ನಿಮಿತ್ತ ಶಿಲನ್ಯಾಸ ಕಾರ್ಯಕ್ರಮ ಜ.22 ರಂದು ಜರುಗಿತು. ಶಿಲನ್ಯಾಸವನ್ನು ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ನೂರಾರು ವರುಷಗಳಿಂದ ಆರಾಧನೆಯನ್ನು ಮಾಡಿಕೊಂಡು ಬರುತ್ತಿರುವ ಪರಪು ಗುತ್ತು ಕರೆಯ ದೈವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಇಂದು ಶಿಲನ್ಯಾಸ ನೆರವೇರಿದೆ. 20ಲಕ್ಷರೂ ವೆಚ್ಚದಲ್ಲಿ ನೂತನ ಶಿಲಾಮಯ ಗುಡಿ ನಿರ್ಮಾಣಗೊಳ್ಳುತ್ತಿದ್ದು, ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಜರುಗುತ್ತಿರುವ ಈ ಪುಣ್ಯ ಕಾರ್ಯದಲ್ಲಿ ನಮ್ಮ ಸಹಕಾರವು ಇದೆ ಎಂದು ತಿಳಿಸಿದರು.
ಧಾರ್ಮಿಕ ನೆಲೆಗಟ್ಟಿನ ಈ ತುಳುನಾಡಿನಲ್ಲಿ ದೈವಸ್ಥಾನಗಳು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಗುತ್ತು ಕರೆಯ ಜೀರ್ಣೋದ್ಧಾರ ಕಾರ್ಯವು ಮುಂದಿನ ಪೀಳಿಗೆಗೆ ದೈವಸ್ಥಾನದ ಬೆಲೆ ಏನೆಂದು ತಿಳಿಸಿಕೊಡುತ್ತದೆ. ಇಂಥಹ ಪುಣ್ಯಕೆಲಸದಲ್ಲಿ ಸೇವೆಯನ್ನು ಮಾಡಲು ನಾನು ಸಹಕಾರವನ್ನು ನೀಡುತ್ತೇನೆ ಎಂದು ಮುನಿಯಾಲು ಉದಯ ಕೃಷ್ಣಯ್ಯ ಚ್ಯಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ತಿಳಿಸಿದರು.
ಕುಕ್ಕುಂದೂರು ಸೀತಾಮಾತಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಶ್ರೀನಿವಾಸ ಗ್ಲಾಸ್ ಕಾರ್ಕಳ ಇದರ ಮಾಲಕ ಗಣಪತಿ ಪೈ, ಶ್ರೀ ಗುರುದೇವ ಪ್ಲಾಸ್ಟಿಕ್ ಮಂಗಳೂರಿನ ಉದ್ಯಮಿ ರೋಶನ್ ಬಾಳಿಗ, ಮುಂಬಯಿ ಉದ್ಯಮಿ ಕರುಣಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ವಸಂತ್ ರಾಜ್, ಕಾರ್ಯಾದರ್ಶಿ ರವೀಂದ್ರ ಶೆಟ್ಟಿ, ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಶೆಟ್ಟಿ ಉಪಸ್ಥಿತರಿದ್ದರು.
ಪೂರ್ಣಿಮಾ ಗೋರೆ ಪ್ರಾರ್ಥಿಸಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ್ ರಾವ್ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಮಹಿಳಾ ಸಮಿತಿ ಕಾರ್ಯದರ್ಶಿ ಜ್ಯೋತಿ ರಮೇಶ್ ನಿರೂಪಿಸಿ, ವಿನಯ್ ಶೆಟ್ಟಿ ಧನ್ಯವಾದವಿತ್ತರು.