ಅಜೆಕಾರು: ಕಾರ್ಕಳ ಮರ್ಣೆ ಗ್ರಾಮದ ಶೀನ (77) ರವರು ಆಕಸ್ಮಿಕವಾಗಿ ತೋಡಿನ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ಫೆ.9ರಂದು ನಡೆದಿದೆ.
ಇವರು ಕೃಷಿ ಕೆಲಸ ಮಾಡಿಕೊಂಡಿದ್ದು ನೀಲಬೈಲು ಎಂಬಲ್ಲಿನ ಜಾಗದ ತೆಂಗಿನ ಮರದಿಂದ ತೆಂಗಿನ ಕಾಯಿ ಹಾಗೂ ಸೀಯಾಳ ಕೊಯ್ಯಲು ದೋಂಟಿ ತೆಗೆದುಕೊಂಡು ಹೋದವರು ಸಂಜೆಯಾದರೂ ವಾಪಾಸ್ಸು ಬಂದಿರುವುದಿಲ್ಲ.
ಅವರ ಮಗ ಸುಧೀರ್ ಹಾಗೂ ಅಕ್ಕಪಕ್ಕದವರೆಲ್ಲಾ ಸೇರಿ ಹುಡುಕಿದಾಗ ಅವರ ಮೃತ ದೇಹವು ಗದ್ದೆ ಬದಿಯ ತೋಡಿನ ನೀರಿನಲ್ಲಿ ತೇಲುತ್ತಿದ್ದು ಫೆ.9ರಂದು ಬೆಳಿಗ್ಗೆ 10.45 ಗಂಟೆಯಿಂದ 04.00 ಗಂಟೆಯ ಮದ್ಯದ ಅವಧಿಯಲ್ಲಿ ತೆಂಗಿನ ಕಾಯಿ ಹಾಗೂ ಸೀಯಾಳ ಕೊಯ್ಯುವಾಗ ಆಕಸ್ಮಿಕವಾಗಿ ತೋಡಿನ ನೀರಿನಲ್ಲಿ ಬಿದ್ದು ಮೃತಪಟ್ಟಿರಬಹುದಾಗಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.