ಜನನಿ ಮಿತ್ರ ಮಂಡಳಿ (ರಿ) ವಾಂಟ್ರಾಯಿ ಪದವು ಇದರ 25 ನೇ ವರ್ಷಕ್ಕೆ ನೂತನ ಪದಾಧಿಕಾರಿಗಳ ನೇಮಕ:ಅಧ್ಯಕ್ಷರಾಗಿ ಶ್ರೀ ದಿವಾಕರ್ ಎಂ. ಬಂಗೇರ ಹಾಗೂ ಕಾರ್ಯದರ್ಶಿಯಾಗಿ ಶ್ರೀ ಪ್ರವೀಣ್ ಮೂಲ್ಯ.
ದಿನಾಂಕ: 16.02.2025 ರಂದು ನಡೆದ ಮಹಾಸಭೆಯಲ್ಲಿ ಜನನಿ ಮಿತ್ರ ಮಂಡಳಿ (ರಿ) ವಾಂಟ್ರಾಯಿ ಪದವು ಇದರ 25 ನೇ ವರ್ಷದ ಅಧ್ಯಕ್ಷರಾಗಿ ದಿವಾಕರ್ ಎಂ. ಬಂಗೇರ ಇವರು ಆಯ್ಕೆಯಾಗಿದ್ದು, ಕಾರ್ಯದರ್ಶಿಗಳಾಗಿ ಪ್ರವೀಣ್ ಮೂಲ್ಯ ಇವರು ಆಯ್ಕೆಯಾಗಿರುತ್ತಾರೆ.
ಜತೆ ಕಾರ್ಯದರ್ಶಿಯಾಗಿ ಯಶವಂತ್ ಗುರ್ಬಿ ಇವರು ಆಯ್ಕೆ ಯಾಗಿದ್ದು, ಗೌರವಾಧ್ಯಕ್ಷರಾಗಿ ಶ್ರೀಧರ್ ಸುವರ್ಣ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಹೇಕಳ ಮತ್ತು ಚಂದ್ರಿಕಾ ದಿವಾಕರ್ ಆಯ್ಕೆಯಾಗಿರುತ್ತಾರೆ.
ಕೋಶಾಧಿಕಾರಿಯಾಗಿ ಪ್ರಶಾಂತ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸದಾನಂದ ಮೋಹನ್ ನಕ್ರೆ ಹಾಗೂ ನಿಕಿತಾ ಮತ್ತುಕ್ರೀಡಾ ಕಾರ್ಯದರ್ಶಿಯಾಗಿ ಸದಾಶಿವ ನಕ್ರೆ ಮತ್ತು ಚೇತನ್ ಮೂಲ್ಯ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ, ಉದಯ ಪೂಜಾರಿ ಜಯಂತಿ ಮೂಲ್ಯ ಪೂರ್ಣಿಮಾ ಪ್ರಕಾಶ್ ಜೋಗಿ, ಜ್ಯೋತಿ ಕುಲಾಲ್ ಅವರು ಆಯ್ಕೆ ಯಾಗಿರುತ್ತಾರೆ. ಗೌರವ ಸಲಹೆಗಾರರಾಗಿ ಜಯ ಮೂಲ್ಯ , ಸತೀಶ್ ಪೂಜಾರಿ , ಆನಂದ ಕಜೆ, ಹರೀಶ್ ಕುಲಾಲ್ ಹಾಗೂ ಜ್ಯೋತಿ ಪೂಜಾರಿ ಇವರು ಆಯ್ಕೆಯಾಗಿರುತ್ತಾರೆ., ಸಾಮಾಜಿಕ ಜಾಲತಾಣ ನಿರ್ವಹಣೆಯ ಜವಾಬ್ದಾರಿಯನ್ನು ಸಂತೋಷ್ ಗುರ್ಬಿ ಮತ್ತು ಶಿವಾನಂದ ಸುವರ್ಣ ಇವರು ಆಯ್ಕೆಯಾಗಿರುತ್ತಾರೆ. ಉಳಿದ ಸಂಘದ ಸದಸ್ಯರನ್ನು ಮಂಡಳಿಯ ಕಾರ್ಯಕಾರಿ ಸದಸ್ಯರನ್ನಾಗಿ ನೇಮಿಸಲಾಯಿತು.