ಸಮಾಜದಲ್ಲಿನ ಮೂಢನಂಬಿಕೆ ಜಾತಿ ವ್ಯವಸ್ಥೆ ಡಾoಬಿಕ ಭಕ್ತಿ ಯನ್ನು ಸರ್ವಜ್ಞ ಕಟುವಾಗಿ ಖಂಡಿಸಿದ್ದಾರೆ ಎಂದು ಮಾಧ್ಯಮ ಬಿಂಬ ಪತ್ರಿಕೆ ಹಾಗೂ ಸ್ವಯಂ ಟೈಮ್ಸ್ ಕಾರ್ಕಳದ ವ್ಯವಸ್ಥಾಪಕ ಸಂಪಾದಕರಾದ ವಸಂತ್ ಕುಮಾರ್ ಹೇಳಿದ್ದಾರೆ.
ಕಾರ್ಕಳ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಕಾರ್ಕಳ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
ಸರ್ವಜ್ಞನ ವಚನಗಳು ಅರ್ಥಪೂರ್ಣ ವಾಗಿದ್ದು ಪ್ರತಿಯೊಬ್ಬರು ಕೂಡ ಅಳವಡಿಕೊಳ್ಳ ಬೇಕು. ಸಮಾಜದಲ್ಲಿನ ಜಾತಿ ವ್ಯವಸ್ಥೆ ಮೂಢನಂಬಿಕೆಯನ್ನು ಖಂಡಿಸಬೇಕು ಮತ್ತು ಮಹಿಳೆಯರಿಗೆ ಉತ್ತಮ ಸ್ಥಾನ ವನ್ನು ಕೂಡ ನೀಡಬೇಕು ಹಾಗು ಕೃಷಿ ಬಗ್ಗೆ ಎಂದು ಸರ್ವಜ್ಞ ಆಗಿನ ಕಾಲದ ತ್ರಿಪದಿಯಲ್ಲೇ ಬರೆದಿದ್ದ. ಇವೆಲ್ಲವನ್ನು ಕೂಡ ಸರ್ವಜ್ಞ ಅಭಿಪ್ರಾಯ ಗಳ ತ್ರಿಪದಿಗಳ ಮೂಲಕ ವಿವರವಾಗಿ ಅವರು ಹೇಳಿದರ
ತಾಲೂಕು ತಹಸೀಲ್ದಾರ್ ಪ್ರದೀಪ್ ರ ವರು ಮಾತನಾಡಿ ದಾರ್ಶನಿಕರು ಸಾಹಿತಿಗಳು ಹಾಗೂ ಕವಿಗಳ ಸೇವೆ ಅಪಾರವಾಗಿದ್ದು ಅವರ ಸಾಧನೆಗಳನ್ನು ತಿಳಿದು ಅವರ ಆದರ್ಶ ಗಳನ್ನು ನಮ್ಮ ಜೀವನದಲ್ಲಿ ಅನುಸರಿಸಬೇಕು ಎಂದು ಹೇಳಿದರು.
ಕಾರ್ಕಳ ಪುರಸಭೆ ಮುಖ್ಯ ಅಧಿಕಾರಿ ರೂಪ ಸಾಮಾಜಿಕ ವ್ಯವಸ್ಥೆಯಲ್ಲಿ ಅಂದಿನಿಂದಲೂ ಮಹಿಳೆಯರಿಗೆ ಪ್ರಾಶಸ್ತ್ಯ ನೀಡಲಾಗಿತ್ತು ಎಂದರು. ಇನ್ನಾ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಕುಶ ಆರ್ ಮೂಲ್ಯ ಮಾತನಾಡಿ ಎಲ್ಲರೊಡನೆ ಸೇವಾ ಮನೋಭಾವನೆಯಿಂದ ಕೂಡಿ ಬದುಕು ಕಾಣಬೇಕು ಎಂದರು. ಜಿಲ್ಲಾ ಕುಲಾಲ ಯುವ ವೇದಿಕೆ ಅಧ್ಯಕ್ಷ ದಿವಾಕರ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.