ಹೆಬ್ರಿ : ಚಾರ ಹಂದಿಕಲ್ಲು ವಿವೇಕಾನಂದ ಯುವ ವೇದಿಕೆ ಹಾಗೂ ಸಂಡೆ ಕ್ರಿಕೆಟರ್ಸ್ ವತಿಯಿಂದ ವಿವೇಕಾನಂದ ಟ್ರೋಫಿ ಕ್ರಿಕೆಟ್ ಟೂರ್ನಿ ಮತ್ತು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತಾಂತರ ಭಾನುವಾರ ನಡೆಯಿತು.
ಟೂರ್ನಿಯನ್ನು ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಕುಡುಬಿ ಸಮುದಾಯದವರು ಶಿಕ್ಷಣದತ್ತ ಹೆಚ್ಚಿನ ಗಮನ ನೀಡಬೇಕು.ವಿವೇಕಾನಂದ ಯುವ ವೇದಿಕೆಯವರು ಟೂರ್ನಿ ಆಯೋಜಿಸಿ ಬಡ ಮಕ್ಕಳ ಕಲ್ಯಾಣಕ್ಕೆ ಸಂಗ್ರಹವಾದ ಹಣವನ್ನು ವಿದ್ಯಾಭ್ಯಾಸಕ್ಕೆ ನೀಡುತ್ತಿರುವುದು ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ. ಇಂತಹ ಸಂಘಸಂಸ್ಥೆಗಳು ಸಮಾಜಕ್ಕೆ ಮಾದರಿಯ ಎಂದರು.
ಊಟದ ವ್ಯವಸ್ಥೆ ಮಾಡಿದ ತೆಂಗಿನಮಕ್ಕಿ ವಸಂತ ನಾಯ್ಕ್ ರನ್ನು ಗೌರವಿಸಲಾಯಿತು.
ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಜೋಮ್ಲು ಬೊಬ್ಬರ್ಯ ದೇವರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಭಾಗವಹಿಸಿ ಶುಭ ಹಾರೈಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಉದ್ಯಮಿ ಕಜ್ಕೆ ಕಾಶಿನಾಥ ಶೆಣೈ, ಜೋಮ್ಲು ಅಭಿವೃದ್ಧಿ ಸೇವಾ ಸಮಿತಿ ಕಾರ್ಯದರ್ಶಿ ಮಿಥುನ್ ಶೆಟ್ಟಿ ಬಾವಿಗದ್ದೆ, ಪ್ರಮುಖರಾದ ಅಶೋಕ ನಾಯ್ಕ, ಕೃಷ್ಣ ನಾಯ್ಕ್ ಮದ್ದೂರುಬೈಲ್, ಜಯರಾಮ ನಾಯ್ಕ, ವಸಂತ ನಾಯ್ಕ, ದಯಾನಂದ ನಾಯ್ಕ, ಸುರೇಶ್ ನಾಯ್ಕ, ಆನಂದ ನಾಯ್ಕ್ ಜಡ್ಡಿನಮನೆ, ಕೃಷಿಕ ರಾಜೇಶ ಪೂಜಾರಿ,ಸುರದಯ ನಾಯ್ಕ್, ಕುಡುಬಿ ಸಮುದಾಯದ ಮುಖಂಡರು, ಕಾರ್ಯಕರ್ತರು, ಸಂಡೆ ಕ್ರಿಕೆಟರ್ಸ್ ಸದಸ್ಯರು ಉಪಸ್ಥಿತರಿದ್ದರು.