ಕಾರ್ಕಳದ ಪರ್ಪಲೆ ಕ್ಷೇತ್ರದಲ್ಲಿ ಇಂದು ಸಂಭ್ರಮದ ಶಿವ ಜಾಗರಣೆ ನಡೆಯಲಿದೆ.
ಮಹಾ ಶಿವರಾತ್ರಿಯ ಪ್ರಯುಕ್ತ ಅಹೋ ರಾತ್ರಿ ಶಿವ ನಾಮ ಸಂಕೀರ್ತನೆ ನಡೆಯಲಿದೆ.
ಇಂದು ಸಾಯಂಕಾಲ 6 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ನೆರವೇರಲಿದೆ.
ಇಂದು ಸಾಯಂಕಾಲ ಓಂಕಾರ ಭಜನಾ ಮಂಡಳಿ ಕಾಬೆಟ್ಟು, ಶಾರದಾಂಬಾ ಭಜನಾ ಮಂಡಳಿ ಅತ್ತೂರು, ವಿಷ್ಣು ಮೂರ್ತಿ ಭಜನಾ ಮಂಡಳಿ ಕಲಂಬಾಡಿ ಪದವು, ಬೆರಂದೊಟ್ಟು ಗರಡಿ ಮಹಿಳಾ ಭಜನಾ ಮಂಡಳಿ, ಸಿರಿ ಭಜನಾ ಮಂಡಳಿ ಜಾರ್ಕಳ, ಸಿದ್ದಿ ವಿನಾಯಕ ಭಜನಾ ಮಂಡಳಿ, ಶ್ರೀಕಾಂತ್ ಶೆಟ್ಟಿ ಮತ್ತು ತಂಡ ದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಸಮಿತಿ ತಿಳಿಸಿದೆ.
previous post