ಕಾರ್ಕಳ: ಕೆದಿಂಜೆ ಗ್ರಾಮದ ಸುಂಕಮಾರು ನಲ್ಲಿ ಮೋಟಾರ್ ಸೈಕಲ್ ಗೆ ಕಾರು ಡಿಕ್ಕಿ ಹೊಡೆದ ಘಟನೆ ಮಾ. 4 ರಂದು ನಡೆದಿದೆ.
ಮೋಟಾರ್ ಸೈಕಲ್ ಸವಾರ ವೈಶಾಕ್ ಎಂಬುವವರು ಪೃಥ್ವಿ ಕೆ. ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರಿನಿಂದ ಪಡುಬಿದ್ರೆ ಮಾರ್ಗವಾಗಿ ನಿಟ್ಟೆಗೆ ರಾಜ್ಯ ಹೆದ್ದಾರಿಯಲ್ಲಿ ಬರುತ್ತಾ ಕೆದಿಂಜೆ ಗ್ರಾಮದ ಸುಂಕಮಾರು ಎಂಬಲ್ಲಿ ತಲುಪುವಾಗ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದು ಅದರ ಚಾಲಕಿಯು ಯಾವುದೇ ಸೂಚನೇ ನೀಡದೇ ನಿರ್ಲಕ್ಷ್ಯತನದಿಂದ ತನ್ನ ಬಲಕ್ಕೆ ರಾಜ್ಯ ಹೆದ್ದಾರಿಗೆ ಚಲಾಯಿಸಿ ವೈಶಾಕ್‌ರವರು ಸವಾರಿ ಮಾಡಿಕೊಂಡು ಬರುತ್ತಿರುವ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ.
ಇದರ ಪರಿಣಾಮ ಸವಾರ ವೈಶಾಕ್ ಮತ್ತು ಹಿಂಬದಿ ಸವಾರೆ ಪ್ರಥ್ವಿ ಕೆ ರವರು ಬೈಕ್ ರಸ್ತೆಗೆ ಬಿದ್ದು, ವೈಶಾಕ್‌ರವರ ತಲೆಗೆ ಒಳಜಖಂ ಮತ್ತು ಸೊಂಟ ಮತ್ತು ಎಡಕಾಲಿಗೆ ರಕ್ತಗಾಯವಾಗಿದ್ದು ಪ್ರಥ್ವಿರವರಿಗೆ ಎಡಕೈ ಮತ್ತು ಎಡಕಾಲಿಗೆ ತರಚಿದ ಗಾಯವಾಗಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.