ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸಿಗುವ ಜನೌಷಧಿ ಮಾದರಿಯಲ್ಲಿಯೇ ಜಾನುವಾರುಗಳಿಗೆ ಪಶು ಔಷಧಿ ಹೆಸರಿನಲ್ಲಿ ಜನರಿಕ್ ಔಷಧಿ ಬಿಡುಗಡೆ ಮಾಡುವ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿರುವುದನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಹಾಗೂ ಸಹಕಾರ ಭಾರತೀಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಸ್ವಾಗತಿಸಿರುತ್ತಾರೆ.
ಪಶು ಗಣತಿಯ ಪ್ರಕಾರ ದೇಶದಲ್ಲಿ ಸುಮಾರು 19.25 ಕೋಟಿ ಜಾನುವಾರುಗಳಿದ್ದು ಪಶು ಔಷಧಿ ಘಟಕ ಯೋಜನೆಯ ಮೂಲಕ ಒಟ್ಟು ₹3880 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ಕಾದಿರಿಸಲು ಸಚಿವ ಸಂಪುಟ ನಿರ್ಧಾರ ಮಾಡಿರುವುದು ಸ್ವಾಗತಾರ್ಹ ಪಶು ಆರೋಗ್ಯ ಮತ್ತು ರೋಗ ನಿಯಂತ್ರಣ ಚಟುವಟಿಕೆಗಳಲ್ಲಿ ಇದರಿಂದಾಗಿ ಬಹಳಷ್ಟು ಪ್ರಯೋಜನವಾಗಲಿದ್ದು,
ವಿಶೇಷವಾಗಿ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿರುವುದು ಎಂದು ಅವರು ತಿಳಿಸಿರುತ್ತಾರೆ.