Blog

ಬೀದಿಗೆ ಬಂದ ಯಸಳೂರು ಕುಟುಂಬ

ವರದಿ :ನಾಗೇಶ್ ಎಂ ಎಚ್ ಮಾಗೇರಿ.

ಅರಣ್ಯ ಇಲಾಖೆಯಿಂದ ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಪ್ರಿಯಾ ಕೋಂ ಶೋಭರಾಜ್ ತೊಂತಲಾಪುರ ಕುಟುಂಬ.

ಕುಟುಂಬದವರಿಗೆ ಬೆಂಬಲವಾಗಿ ನಿಂತ ಸಾಮಾಜಿಕ ಹೋರಾಟಗಾರರಿಗೆ ಕಾಣದ ಕೈಗಳಿಂದ ಬೆದರಿಕೆ.

ಘಟನೆಯ ವಿಚಾರವಾಗಿ
ಶಾಸಕರಾದ ಸಿಮೆಂಟ್ ಮಂಜು ರವರು ಸದನದ ಗಮನಕ್ಕೆ ತಂದಿರುತ್ತಾರೆ.

ಘಟನೆ ವಿವರ:

ಹಾಸನ ಜಿಲ್ಲೆಯ
ಸಕಲೇಶಪುರ ತಾಲೂಕು ಯಶಳೂರು ಹೋಬಳಿಯ ತೊಂತಲಾಪುರ ಗ್ರಾಮದ ಶೋಭರಾಜ್ ರವರು ಯಸಳೂರು(ಮರಡಿಕೆರೆ) ಗ್ರಾಮದ ಸರ್ವೆ ನಂಬರ್ 361 ರಲ್ಲಿನ ಸರ್ಕಾರಿ ಗೋಮಾಳ ಪಹಣಿಯಲ್ಲಿ ಇರುವಂತೆ ಗ್ರಾಮ ಪಂಚಾಯಿತಿ ಫಲಾನುಭವಿ ಕೋಡ್ 640834
ಸಹಾಯಧನ ಅನುದಾನದ ಅಡಿಯಲ್ಲಿ ಪ್ರಿಯ ಕೋ ಶೋಭ ರಾಜ್ ಮನೆಯನ್ನು ನಿರ್ಮಿಸಿ ಕೊಂಡಿರುತ್ತಾರೆ.
ಮೊದಲಿಗೆ ಮನೆ ನಿರ್ಮಿಸುವಾಗ ಯಾವುದೇ ಇಲಾಖೆಗಳಿಂದ ಆಡಚಣೆಗಳಾಗಲಿ ಮತ್ತು ಗ್ರಾಮಸ್ಥರುಗಳಿಂದ ತೊಂದರೆಯಾಗಲಿ ಇರುವುದಿಲ್ಲ. ಜೊತೆಗೆ ಗ್ರಾಮ ಪಂಚಾಯತಿ ಜಿಪಿಎಸ್ ಕೂಡ ಆಗಿ ಮನೆ ನಿರ್ಮಾಣಕ್ಕೆ ಕೈ ಹಾಕಿರುತ್ತಾರೆ. ಅದರಂತೆ ನಾಲ್ಕು ಬಿಲ್ಲುಗಳ ಸಹ ಫಲಾನುಭಾವಿಯಾದ ಪ್ರಿಯಾ ಕೋಂ ಶೋಭರಾಜ್ ರವರ ಖಾತೆಗೆ ಜಮಾ ಆಗಿದೆ ಎಂದು ತಿಳಿಸಿದ್ದಾರೆ

ಫೋಟೋ
ಪಂಚಾಯಿತಿ ಅನುದಾನದಲ್ಲಿ ಕಟ್ಟಿರುವ ಮನೆ.

ನಂತರದಲ್ಲಿ
ಈ ಮನೆ ಕಟ್ಟಿರುವುದು ಅರಣ್ಯ ಇಲಾಖೆಯ ಭೂಮಿಯಲ್ಲಿ ಎಂದು ಇಲಾಖೆಯವರು ಈ ಕುಟುಂಬದವರ ಮೇಲೆ ದೌರ್ಜನ್ಯವೆಸಗಲು ಶುರುಮಾಡಿದ್ದರು ಎಂದು ತಿಳಿದು ಬಂದಿದೆ

ಶೋಭರಾಜ್ ರವರು
ಮನೆಯ ಹತ್ತಿರ ಇರುವ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಮರಗಳನ್ನು ಕಡಿದಿದ್ದಾರೆ ಎಂಬ ಆರೋಪಗಳನ್ನು ಮಾಡಿ ಜುಲೈ 3 ರಂದು ಇವರ ಮೇಲೆ ಹಲ್ಲೆ ಮಾಡಿ‌,ಜಾತಿ ನಿಂದನೆ ಮಾಡಿ ದೌರ್ಜನ್ಯ ವೆಸಗಿ ಬಂಧಿಸಿ ರಾತ್ರಿ 8.30 ರ ಸುಮಾರಿಗೆ ವಾಪಾಸ್ಸು ಕಳಿಸಿರುತ್ತಾರೆ. ನಂತರ ಶೋಭರಾಜ್ ರವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ
ಮರುದಿನ ಬೆಳಿಗ್ಗೆ ಅರಣ್ಯ ಇಲಾಖೆಯವರು ಯಾವುದೇ ನೋಟಿಸ್ ನೀಡದೆ ಏಕಾಏಕಿ ಗ್ರಾಮ ಪಂಚಾಯಿತಿ ಅನುದಾನದ ಅಡಿಯಲ್ಲಿ ನಿರ್ಮಿಸಲಾದ ಮನೆಯನ್ನು ಜೆಸಿಬಿಯನ್ನೂ ಬಳಸಿ ನೆಲಸಮ ಮಾಡಲಾಗಿದೆ

ವಿಡಿಯೋ


ಅರಣ್ಯ ಇಲಾಖೆಯವರು ಮನೆ ನೆಲಸಮ ಮಾಡಿರುವುದು.

ಅರಣ್ಯ ಇಲಾಖೆಯ ಸಿಬ್ಬಂದಿ RFO ಕೃಷ್ಣ ರವರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಕೇಸ್
ದಾಖಲಾಗುತ್ತದೆ.

ಜೊತೆಗೆ ಅರಣ್ಯ ಇಲಾಖೆಯವರು ಕೂಡ ಈ ಕೇಸ್ ವಿರುದ್ಧವಾಗಿ ಶೋಭರಾಜ್ ಮತ್ತು ನ್ಯಾಯ ಕೇಳಲು ಹೋಗಿದ್ದ ಹೋರಾಟಗಾರರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ಈಗ
ನ್ಯಾಯಾಲಯದ ಅಂಗಳದಲ್ಲಿ ಈ ಪ್ರಕರಣ ಬಂದು ನಿಂತಿದೆ.

ಪ್ರಿಯಾ ಶೋಭರಾಜ್ ರವರು ಸಾಮಾಜಿಕ ಹೋರಾಟಗಾರರ ಸಹಕಾರ ಪಡೆದು ಕಾನೂನು ಹೋರಾಟವನ್ನು ಮುಂದುವರಿಸಿ
ಶಾಸಕರಿಗೆ ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ
ಮನೆ ಕಟ್ಟಲು ಗ್ರಾಮ ಠಾಣ ಗುರುತಿಸಿಕೊಡಲು ಮನವಿ ಮಾಡುತ್ತಾರೆ.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಸಳೂರು ಹೋಬಳಿಯ ತೊಂತಲಾಪುರ ಗ್ರಾಮದ ಸರ್ವೆ ನಂಬರ್ 01 ರಲ್ಲಿ ಪಂಚಾಯತಿ ಪಿ.ಡಿ.ಓ ರವರ ಸಮುಖ್ಖದಲ್ಲಿ ಸರ್ಕಾರಿ ಸರ್ವೆಯರ್ ರವರು ಗ್ರಾಮ ಠಾಣವನ್ನು ಗುರುತಿಸಿಕೊಟ್ಟಿದ್ದಾರೆ.

ಈ ಗ್ರಾಮ ಠಾಣದಲ್ಲಿ ಪ್ರಿಯಾ ಶೋಭರಾಜ್ ಕುಟುಂಬ ವಾಸ ಮಾಡಲು ಒಂದು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಅದರಲ್ಲಿಂದು ವಾಸವಿದ್ದಾರೆ.

ಫೋಟೋ
ಕುಟುಂಬ ವಾಸ ಇರುವ ಗ್ರಾಮ ಠಾಣ ದಲ್ಲಿ ಇರುವ ಶೆಡ್.

ಆದರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ದೇವರಾಜ್ ಮತ್ತು ಪಂಚಾಯತಿ ಅಧ್ಯಕ್ಷರುಗಳು ಶೋಭರಾಜ್ ರವರನ್ನು ಕುರಿತು ನೀನು ಇಲ್ಲಿ ಮನೆ ಕಟ್ಟಬಾರದು ಗ್ರಾಮ ಠಾಣಾ ಜಾಗವನ್ನು ನಾವು ಗುರುತಿಸುವ ವರೆಗೂ ನೀವು ಇಲ್ಲಿ ಯಾರು ವಾಸ ಮಾಡಬಾರದು ನಿಮ್ಮ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಬೆದರಿಕೆಯನ್ನು ನೀಡುತ್ತಾರೆ.
ಎಂದು ಪ್ರಿಯ ಶೋಭರಾಜ್
ತಿಳಿಸಿದ್ದಾರೆ.

ಹಾಗಾದರೆ
ನಾನು ಇನ್ನು ಎಲ್ಲಿ ಮನೆ ಕಟ್ಟಬೇಕು?
ಎಲ್ಲಿ ವಾಸ ಮಾಡಬೇಕು?
ಎಂಬುದು ಪ್ರಶ್ನಾರ್ಥಕವಾಗಿದೆ.
ಎಂದು ನೊಂದ ಕುಟುಂಬದವರು
ಅಳಲು ತೋಡಿಕೊಂಡಿದ್ದಾರೆ.

ಈ ಘಟನೆಯಲ್ಲಿ ನೊಂದ ಕುಟುಂಬದವರಿಗೆ ಮತ್ತು ಇವರಿಗೆ ನ್ಯಾಯ ದೊರಕಿಸಲು ಮುಂದೆ ನಿಂತ ಹೋರಾಟಗಾರರ ವಿರುದ್ಧ
ಕಾಣದ ಕೈಗಳು ಬೆದರಿಕೆ ಹಾಕುತ್ತಿರುವುದು ಎಷ್ಟು ಸರಿ?
ಸಾಮನ್ಯ ಜನರಿಗೆ ಕುತೂಹಲ ಮೂಡಿಸಿದೆ.

Related posts

ಮಾಳ ಶ್ರೀ ಗುರುಕುಲ ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವದ ಸಂಭ್ರಮ

Madhyama Bimba

ಹೆಬ್ರಿ ಜೀರ್ಣೋದ್ದಾರಕ್ಕೆ ಭೂಮಿ ಪೂಜೆ

Madhyama Bimba

ಪತ್ರಕರ್ತರಿಗೆ ಸರಕಾರಿ ಸವಲತ್ತು  ನೀಡಿ – ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಮನವಿ ಸಲ್ಲಿಸಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More