ಮೂಡುಬಿದಿರೆ

ಎಕ್ಸಲೆಂಟ್‌ನಲ್ಲಿ ಡಿ. 18ರಂದು ಸಂಗೀತ ಸಂಜೆ

ಭಾರತೀಯ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಸಾಧಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರ ಸಂಗೀತ ಕಚೇರಿ ಮೂಡುಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಡಿ. 18ರಂದು (ನಾಳೆ) ಸಾಯಂಕಾಲ ಗಂಟೆ 5.00೦ರಿಂದ 3 ಗಂಟೆಗಳ ಕಾಲ ನಡೆಯಲಿದೆ.


ನಾಡಿನ ಸಂಗೀತ ಸಾಂಸ್ಕೃತಿಕ ಕ್ಷೇತ್ರವನ್ನು ಬೆಳೆಸಿ ಪೋಷಿಸುವ ಇರಾದೆಯೊಂದಿಗೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾಂಸ್ಕೃತಿಕ ಹಬ್ಬವಾಗಿ ನಡೆಸಲಾಗುವುದು ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್ ತಿಳಿಸಿದ್ದಾರೆ.

ಸಂಗೀತ ರಸಸಂಜೆಯಲ್ಲಿ ಹಾರ್ಮೋನಿಯಂನೊಂದಿಗೆ ನರೇಂದ್ರ ನಾಯಕ್, ತಬಲಾದಲ್ಲಿ ಕೇಶವ ಜೋಷಿ, ಹೇಮಂತ್ ಜೋಷಿ, ಅಕವಾಜ್‌ನಲ್ಲಿ ಶ್ರೀಧರ್ ಪ್ರಭು ಸಹಕರಿಸಲಿದ್ದಾರೆ. ಖ್ಯಾತ ಯುವ ಸಿತಾರ್ ವಾದಕ ಅಂಕುಶ್ ಎನ್. ನಾಯಕ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಗೀತ ಪ್ರಿಯರಿಗೆ ಉಚಿತ ಪ್ರವೇಶವಿದ್ದು ಎಕ್ಸಲೆಂಟ್ ಸಂಗೀತ ಸಂಜೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಸಕ್ತರಿಗೆ ಉಚಿತ ಬಸ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

Related posts

  ಪಡುಮಾರ್ನಾಡಿನ ಸುಷ್ಮಾ ಶೆಟ್ಟಿ ಕಾಮರ್ಸ್ ನಲ್ಲಿ ಶೇ. 98

Madhyama Bimba

ಮೂಡುಬಿದಿರೆಯಲ್ಲಿ ಸಮಾಜ ಮಂದಿರ, ಯುವವಾಹಿನಿಯಿಂದ ಬೆದ್ರ ಗೂಡುದೀಪ ಮತ್ತು ರಂಗೋಲಿ

Madhyama Bimba

ಮೂಡುಬಿದಿರೆ ಕಂಬಳದಲ್ಲಿ ಸಾಧಕರಿಗೆ ಪ್ರಶಸ್ತಿ, ಗೌರವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More