Blog

ಕಾರ್ಕಳದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಯುವ ಕಾಂಗ್ರೆಸ್ ಅರೋಪ


ಕಾರ್ಕಳ:ಕಾರ್ಕಳದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಬಜೆಪಿಯು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದು ಕಳಪೆ ಕಾಮಗಾರಿಗಳನ್ನು ನಡೆಸಿ ಸರ್ಕಾರ ಮತ್ತು ಸಾರ್ವಜನಿಕರನ್ನು ಮೋಸಗೊಳಿಸುತ್ತಿದೆ ಎಂದು ಕಾರ್ಕಳ ಯುವ ಕಾಂಗ್ರೆಸ್ ಅರೋಪಿಸಿದೆ.
ಡಿ. ೧೮ ರಂದು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಮಾತನಾಡಿ ಬಿಜೆಪಿಗರು ನಡೆಸುತ್ತಿರುವ ಭ್ರ್ರಷ್ಟಾವಾರದ ಬಗ್ಗೆ ತಿಳಿಸಿದರು.
ಮುನಿಯಾಲು ಪಡುಕುಡೂರು ರಸ್ತೆಯ ಕಾಮಗಾರಿ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ವಿರುದ್ದ ಅಪಪ್ರಚಾರ ನಡೆಸಿರುವ ಕಾರ್ಕಳ ಬಿಜೆಪಿ ಅಧ್ಯಕ್ಷರಿಗೆ ತಮ್ಮದೇ ಪಕ್ಷದ ಮುಖಂಡರು ನಿಟ್ಟೆ ಗ್ರಾಮದ ಶಿಶು ಮಂದಿರ ಬಾಳೆಹಿತ್ಲು ಸಂಪರ್ಕ ರಸ್ತೆಯನ್ನು ೨೦೨೩ ವಿಧಾನಸಭಾ ಚುನಾವಣೆಯ ಒಂದು ತಿಂಗಳ ಮುಂಚಿತವಾಗಿ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ವರ್ಕ್ ಆರ್ಡರ್ ಇಲ್ಲದೆ ಬಿಜೆಪಿ ಮುಖಂಡ ಜಯರಾಮ ಸಾಲಿಯಾನ್ ಬೋಳ ಎನ್ನುವವರು ರಸ್ತೆಯನ್ನು ಅಕ್ರಮವಾಗಿ ಅಗೆದು ಹಾಕಿ ಸರ್ಕಾರದ ಸ್ವತ್ತಿಗೆ ಹಾನಿ ಎಸಗಿ ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡಿದ್ದಾರೆ ಯಾವುದೇ ಸರ್ಕಾರಿ ಟೆಂಡರ್ ಅಥವಾ ಇಲಾಖೆಯ ಅನುಮತಿಯಿಲ್ಲದೆ ಸುಸ್ಥಿತಿಯಲ್ಲಿದ್ದ ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಅಗೆದು ಹಾಕಿ ಸರ್ಕಾರದ ಆಸ್ತಿಯನ್ನು ತನ್ನ ಖಾಸಗಿ ಸ್ವತ್ತಿನಂತೆ ಬಳಸಿರುವ ಇವರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು ಎಂದು ಕಾರ್ಕಳ ಯುವ ಕಾಂಗ್ರೆಸ್ ಆಗ್ರಹಿಸಿದೆ.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಇನ್ನಾ ಮಾತನಾಡಿ ೨೦೨೩ರಲ್ಲಿ ಬಿಜೆಪಿ ಆಡಳಿತದಲ್ಲಿ ಸುನಿಲ್ ಕುಮಾರ್ ರವರು ಸಚಿವರಾಗಿದ್ದ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ೫ ಕೋಟಿ ರೂಪಾಯಿ ಅನುದಾನವನ್ನು ಮಂಜೂರುಗೊಳಿಸಿ ರಂಗಾಯಣ ರಂಗಮಂದಿರ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಗಾಗಿತ್ತು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರವು ಇದರ ಕಾಮಗಾರಿಯನ್ನು ನಡೆಸುತ್ತಿದೆ. ಆದರೆ ರಂಗಾಯಣ ರಂಗಮಂದಿರದ ಕಟ್ಟಡಗಳ ಕಿಟಕಿ ಬಾಗಿಲುಗಳಿಗೆ ಹಳೆಯ ಕಟ್ಟಡಗಳ ಕಿಟಕಿ ಬಾಗಿಲುಗಳನ್ನು ಬಳಸಿ ಸರಕಾರವನ್ನು ವಂಚಿಸಲಾಗಿದೆ. ಸರ್ಕಾರದ ಅನುದಾನವನ್ನು ಬಳಸಿಕೊಂಡು ನಿರ್ಮಾಣವಾಗುತ್ತಿರುವ ಕಾರ್ಕಳ ರಂಗಾಯಣವು ಇಂದು ಭ್ರಷ್ಟಾಚಾರದ ಕೂಪವಾಗಿದೆ.
ಹೊಸ ಕಟ್ಟಡದ ಕಿಟಕಿ ಮತ್ತು ದಾರಂದ ಬಾಗಿಲುಗಳಿಗೆ ಹಳೆಯ ಮರದ ವಸ್ತುಗಳನ್ನು ಬಳಸಲಾಗಿರುವುದು ಇದು ಕಳಪೆ ಕಾಮಗಾರಿಗೆ ಜೀವಂತ ಸಾಕ್ಷಿಯಾಗಿದೆ. ಇದು ಕೇವಲ ಕಳಪೆ ಕಾಮಗಾರಿ ಮಾತ್ರವಲ್ಲದೆ ಕಾರ್ಕಳದಲ್ಲಿ ಭಾರೀ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿದ್ದೇವೆ ಎಂದು ಬಿಂಬಿಸಿ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರದ ಹಣವನ್ನು ಲೂಟಿ ಹೊಡೆಯುವ ಯೋಜಿತ ಸಂಚಾಗಿದೆ. ಕಾಮಗಾರಿ ನಡೆಯುವ ಸ್ಥಳಕ್ಕೆ ಶಾಸಕ ಸುನಿಲ್ ಕುಮಾರ್ ಅವರು ತನ್ನ ಬೆಂಬಲಿಗರೊಂದಿಗೆ ಹಲವಾರು ಬಾರಿ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದು ಅವರಿಗೆ ಇಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗಿದ್ದು ಯಾಕೆ ಕಂಡಿಲ್ಲ ಎಂದು ಪ್ರಶ್ನಿಸಿದರು.
ಸುನಿಲ್ ಅವರಿಗೆ ಇವೆಲ್ಲದರ ಮಾಹಿತಿ ಇದ್ದು ಅವರೇ ಇಲ್ಲಿನ ಕಳಪೆ ಕಾಮಗಾರಿಗೆ ಕಾರಣರಾಗಿದ್ದಾರೆ, ಈ ಕಳಪೆ ಕಾಮಗಾರಿಗೆ ಸುನಿಲ್ ಕುಮಾರ್ ಅವರ ಸಂಪೂರ್ಣ ಶ್ರೀರಕ್ಷೆ ಇದ್ದು ಸ್ವತಃ ಸುನಿಲ್ ಕುಮಾರ್ ಅವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಸುನಿಲ್ ಕುಮಾರ್ ನಿರ್ದೇಶನದಂತೆ ಈ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಕಾರ್ಕಳ ಯುವ ಕಾಂಗ್ರೆಸ್ ನೇರ ಆರೋಪ ಮಾಡಿದೆ.
ಸುನಿಲ್ ಕುಮಾರ್ ಅವರು ಕಾರ್ಕಳದಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕದ ೨೧ ವರ್ಷಗಳಿಂದ ಕಾರ್ಕಳದಲ್ಲಿ ಹಗರಣಗಳ ಸರಮಾಲೆಯೇ ನಡೆಯುತ್ತಿದೆ. ರಾಜ್ಯದಲ್ಲಿಯೇ ಸುದ್ದಿಯಾದ ಪರಶುರಾಮ ಥೀಮ್ ಪಾರ್ಕ್ ಕಂಚಿನ ಪ್ರತಿಮೆ ಎಂದು ಜನರನ್ನು ನಂಬಿಸಿ ಹೇಳಿ ಫೈಬರ್ ಪ್ರತಿಮೆ ನಿಲ್ಲಿಸಿ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ ಸರ್ಕಾರಿ ಕಾಮಗಾರಿಗಳಿಗೆ ಬರಬೇಕಾದ ಸಾವಿರಾರು ಚೀಲ ಸಿಮೆಂಟ್‌ನ್ನು ದುರುಪಯೋಗ ಮಾಡಿದ್ದಾರೆ ಎಂದರು
ರಂಗಾಯಣದ ಕಳಪೆ ಕಾಮಗಾರಿಯ ಬಗ್ಗೆ ಉನ್ನತ ಮಟ್ಟದ ತಾಂತ್ರಿಕ ತನಿಖೆಯಾಗಬೇಕು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು. ನಿಟ್ಟೆ ಗ್ರಾಮದ ಶಿಶುಮಂದಿರ ಬಾಳೆಹಿತ್ಲು ರಸ್ತೆ ಅಗೆದ ಜಯರಾಮ ಸಾಲ್ಯಾನ್ ಅವರಿಂದಲೇ ರಸ್ತೆ ದುರಸ್ತಿ ವೆಚ್ಚವನ್ನು ವಸೂಲಿ ಮಾಡಬೇಕು. ೨೧ ವರ್ಷಗಳ ಅವಧಿಯಲ್ಲಿ ನಡೆದ ಎಲ್ಲಾ ಯೋಜನೆಗಳ ಬಗ್ಗೆ ನ್ಯಾಯಾಂಗ ತಖೆಯಾಗಬೇಕು ಎಂದು ಅವರು ಆಗ್ರಹಿಸಿದರು

Related posts

ಶನಿವಾರ ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿಬಳಗದಿಂದ ಶಿವದೂತ ಗುಳಿಗೆ

Madhyama Bimba

ಪಿಕಪ್ ವಾಹನ ಕಳ್ಳತನ

Madhyama Bimba

ಮುನಿಯಾಲು ಸುಶೀಲ ಆಚಾರ್ಯ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More