ಕಾರ್ಕಳ

ಕನ್ನಡ ಭಾಷಣ: ಕ್ರಿಯೇಟಿವ್‌ನ ಆದ್ಯ ರಾಜ್ಯ ಮಟ್ಟಕ್ಕೆ

ಕಾರ್ಕಳ: ಕ್ರಿಯೇಟಿವ್ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆದ್ಯ ಎಸ್. ಪಡ್ರೆ ಅವರು ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕನ್ನಡ ಭಾಷಣ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲಿನ ಆಳವಾದ ಅಭಿಮಾನವನ್ನು ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸಿದ ಆದ್ಯ ಅವರು, ಸುಸ್ಪಷ್ಟ ಉಚ್ಚಾರಣೆ, ವಿಚಾರಬದ್ಧ ವಿಷಯ ಪ್ರಸ್ತುತಿ ಹಾಗೂ ಆತ್ಮವಿಶ್ವಾಸಪೂರ್ಣ ನಿರೂಪಣೆಯಿಂದ ಮೆಚ್ಚುಗೆಗೆ ಪಾತ್ರರಾದರು.


ಆದ್ಯ ಎಸ್. ಪಡ್ರೆ ಅವರ ಈ ಸಾಧನೆಗೆ ಕ್ರಿಯೇಟಿವ್ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ಸಹಪಾಠಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ರಾಜ್ಯ ಮಟ್ಟದ ಸ್ಪರ್ಧೆಯಲ್ಲೂ ಆದ್ಯ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಲಿ ಎಂಬ ಹಾರೈಕೆಯನ್ನು ವ್ಯಕ್ತಪಡಿಸಿದ್ದಾರೆ.

Related posts

ಕಾರ್ಕಳ: ವಿಷ ಸೇವಿಸಿ ಆತ್ಮಹತ್ಯೆ

Madhyama Bimba

ಹೆಬ್ರಿ: ಕಾರಿಗೆ ಪಿಕ್ ಅಫ್ ವಾಹನ ಡಿಕ್ಕಿ- ಗಾಯ

Madhyama Bimba

ಸಿಬಿಎಸ್ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಶಾಲೆಗೆ ಶೇ. 100 ಫಲಿತಾಂಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More