Blog

ಕಾರ್ಕಳ ತಾಲೂಕು ಅಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಸದಾನಂದ ಸಾಲಿಯಾನ್ ಆಯ್ಕೆ

ಕಾರ್ಕಳ: ಕಾರ್ಕಳ ತಾಲೂಕು ಅಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಖ್ಯಾತ ನ್ಯಾಯವಾದಿ ಬಿ .ಸದಾನಂದ ಸಾಲಿಯಾನ್  ಆಯ್ಕೆಯಾಗಿದ್ದಾರೆ. ಮಾ. 2ರಂದು ಕಾರ್ಕಳದ ಮನ್ನಾರ ದೇವಸ್ಥಾನದಲ್ಲಿ ನಡೆದ ಅಟೋ ಚಾಲಕ ಮಾಲಕ ಸಂಘದ ಸಾಮಾನ್ಯ ಸಭೆಯಲ್ಲಿ  ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸುಮಾರು 20 ವರ್ಷಗಳಿಂದ ನ್ಯಾಯವಾದಿಗಳಾಗಿ ಕಾರ್ಕಳ ಹಾಗೂ ಬೈಲೂರಿನಲ್ಲಿ  ಸೇವೆ ಸಲ್ಲಿಸುತ್ತಿದ್ದ ಇವರು ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರಿಯವಾಗಿ  ತೊಡಗಿಸಿಕೊಂಡಿದ್ದಾರೆ.

ಕಾರ್ಕಳ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಬೈಲೂರು ಬೀದಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಂತಿ ಯುವಕ ವೃಂದ ಜಾರ್ಕಳ ಕುಕ್ಕುಂದೂರು ಇದರ  ಅಧ್ಯಕ್ಷರಾಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘದ  ಅಧ್ಯಕ್ಷರಾಗಿ ಅಮೃತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಕರಕರಿ ಫ್ರೆಂಡ್ಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Related posts

ಪತ್ರಕರ್ತರಿಗೆ ಸರಕಾರಿ ಸವಲತ್ತು  ನೀಡಿ – ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಮನವಿ ಸಲ್ಲಿಸಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ

Madhyama Bimba

ಸೈಬರ್ ವಂಚಕನಿಂದ ಕಾರ್ಕಳದ ಸ್ವಯಂ ಟೈಮ್ಸ್ ಚಾನೆಲ್ ಹ್ಯಾಕ್

Madhyama Bimba

ನಲ್ಲೂರು ಗೋ ಕಳ್ಳತನ – ಶಿವಪ್ರಸಾದ್ ಬಂಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More