ಕಾರ್ಕಳ

ಅರ್ಜುನಾಪುರದಲ್ಲಿ ವಿದ್ವಾನ್ ವೇ|| ಮೂ|| ಉಮೇಶ್ ಭಟ್ ಅವರಿಗೆ ಶನಿವಾರ ಸನ್ಮಾನ

ಶಿರ್ತಾಡಿ – ವಾಲ್ಪಾಡಿ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 14ರಂದು ಸಾಯಂಕಾಲ ಗಂಟೆ 5-30ಕ್ಕೆ ಕಳೆದ 3 ವರ್ಷಗಳಿಂದ ದೇವಸ್ಥಾನದಲ್ಲಿ ತಂತ್ರಿವರ್ಯರಾದ ವಿದ್ವಾನ್। ವೇ|| ಮೂ|| ಉಮೇಶ್ ಭಟ್ ಅವರಿಗೆ ಸನ್ಮಾನ ನಡೆಯಲಿದೆ.

ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಘಟಿಕೋತ್ಸವದಲ್ಲಿ, ಸಂಸ್ಕೃತ ಎಂ. ಎ. ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದು ರಾಜ್ಯಪಾಲರಿಂದ ಚಿನ್ನದ ಪದಕ ಸ್ವೀಕರಿಸಿದ್ದರು.

ಸಾಯಂಕಾಲ ಘಂಟೆ 5-30ರಿಂದ ಯಕ್ಷಗಾನ ನಾಟ್ಯ ವೈಭವ (ಶ್ರೀ ಮಹಾಲಿಂಗೇಶ್ವರ ಯಕ್ಷನಾಟ್ಯ ತರಬೇತಿ ಕೇಂದ್ರ, ಅರ್ಜುನಾಪುರ ಇದರ ಮಕ್ಕಳಿಂದ) ಘಂಟೆ 7-00ರಿಂದ : ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅನುವಂಶಿಕ ಆಸ್ರಣ್ಣರು ವೇ। ಮೂ। ಉಮಾಶಂಕರ್ ಭಟ್, ಶಿಮುಂಜೆಗುತ್ತು ಎಸ್. ಡಿ. ಸಂಪತ್ ಸಾಮ್ರಾಜ್ಯ, ವೈದ್ಯರಾದ ಡಾ|| ಕೆ. ಕೃಷ್ಣರಾಜ್ ಭಟ್, .
ಡಾ|| ಆಶೀರ್ವಾದ್ ಎಂ. ಪಿ., ರೋಟರಿ ಪದವಿಪೂರ್ವ ಕಾಲೇಜು, ಪ್ರಾಂಶುಪಾಲರು ರವಿಕುಮಾರ್, ಭುವನಜ್ಯೋತಿ ರೆಸಿಡೆನ್ಸಿಯಲ್ ಸ್ಕೂಲ್ ಟ್ರಸ್ಟಿ ಶ್ರೀಮತಿ ಲತಾ ಜನಾರ್ಧನ್ ಆಚಾರ್ಯ ಭಾಗವಹಿಸಲಿದ್ದಾರೆ.

ನಂತರ ಉಮೇಶ್ ಮಿಜಾರ್ ಮತ್ತು ಬಳಗದವರಿಂದ ಕಾಮಿಡಿ ಶೋ “ತೆಲಿಕೆದ ಗೊಂಚಿಲ್”
ಹಾಸ್ಯ-ನಾಟ್ಯ-ಸಂಗೀತ, ರಾತ್ರಿ ಗಂಟೆ 7-45ರಿಂದ ಸಂಕ್ರಮಣ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು.

Related posts

ಕಾರ್ಕಳ: “ಸ್ವಚ್ಚ ವಿಚಾರ್ ” ಸಂವಾದ ಕಾರ್ಯಕ್ರಮ

Madhyama Bimba

ಅಜೆಕಾರಿನಲ್ಲಿ ನಾಳೆ (ಫೆ. 07ರಂದು) ಮಂದಾರ್ತಿ ಕ್ಷೇತ್ರ ಮಹಾತ್ಮೆ ಯಕ್ಷಗಾನ

Madhyama Bimba

ಶ್ರೀ ರವಿಶಂಕರ ವಿದ್ಯಾ ಮಂದಿರದ ವಾರ್ಷಿಕೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More