**ಲಯನ್ಸ್ ಕ್ಲಬ್ ಕಾರ್ಕಳಕ್ಕೆ ಲಯನ್ಸ್ ಗವರ್ನರ್ ಅಧಿಕೃತ ಭೇಟಿ**
ಲಯನ್ಸ್ ಕ್ಲಬ್ ಕಾರ್ಕಳ ಘಟಕಕ್ಕೆ ಲಯನ್ಸ್ 317ಸಿ ಯ ಗವರ್ನರ್ Ln.ಮಹಮ್ಮದ್ ಹನೀಫ್ ಅವರ ಅಧಿಕೃತ ಭೇಟಿ ಸಮಾರಂಭ ತಾಲೂಕು ಆಫೀಸ್ ಬಳಿಯ ಲಯನ್ಸ್ ಭವನದಲ್ಲಿ ಜರಗಿತು. ಅಂದು ವಿವಿಧ ಶಾಲೆ ಹಾಗೂ ಆಶ್ರಯಗಳಿಗೆ ಗವರ್ನರ್ ಮುಖಾಂತರ ಧನ ಸಹಾಯ ನೀಡಲಾಯಿತು. ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಮಾತನಾಡಿದ ಗವರ್ನರ್ ಅವರು ಕಾರ್ಕಳ ಕ್ಲಬ್ ನ ಇಷ್ಟು ವರ್ಷದ ಸಾಧನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ನಂತರ ಗವರ್ನರ್ಯವರನ್ನು ಸನ್ಮಾನಿಸಲಾಯಿತು.ಗವರ್ನರ್ ಅವರು ಕಾರ್ಕಳ ಕ್ಲಬ್ ನ ಅಧ್ಯಕ್ಷರಾದ Ln.ನಿತ್ಯಾನಂದ ಭಂಡಾರಿ ಹಾಗೂ ಕಾರ್ಯದರ್ಶಿ Ln.ಆಶಿಕ್ ಶೆಟ್ಟಿ ಹಾಗೂ ಖಜಾಂಚಿ ರೋಹನ್ ಆಚಾರ್ಯ ಅವರನ್ನು ವರ್ಷವಿಡಿ ವಲಯದಲ್ಲಿ ನೀಡಿದ ಕಾರ್ಯಕ್ರಮಗಳಿಗೆ ಸನ್ಮಾನಿಸಿದರು
ವೇದಿಕೆಯಲ್ಲಿ ಲಯನ್ ಜಿಲ್ಲಾ ಕಾರ್ಯದರ್ಶಿ Ln.ಗಿರೀಶ್ ರಾವ್, ಲಯನ್ ಜಿಲ್ಲಾ ಖಜಾಂಚಿ Ln.ಶ್ರೀನಿವಾಸ ಪೈ, ಪ್ರಾಂತ್ಯ ಅಧ್ಯಕ್ಷರಾದ Ln.ಹರೀಶ್ ಬೆಳಿಂಜೆ,ಅಧ್ಯಕ್ಷರಾದ Ln.ನಿತ್ಯಾನಂದ ಭಂಢಾರಿ ಕಾರ್ಯದರ್ಶಿ Ln.ಆಶಿಕ್ ಶೆಟ್ಟಿ,ಖಜಾಂಚಿ Ln.ರೋಹನ್ ಆಚಾರ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಘಟಕದ ಅಧ್ಯಕ್ಷರು ಹಾಗು ಸದಸ್ಯರುಗಳು ಕಾರ್ಕಳ ಘಟಕದ ಲಯನ್ಸ್ ಸದಸ್ಯರು ಹಾಗೂ ಕುಟುಂಬದವರು ಆಗಮಿಸಿದ್ದರು.ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದವನ್ನು Ln. ಆಶಿಕ್ ಶೆಟ್ಟಿ ಮಾಡಿದರು.





