ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಯೋಗೀಶ್ ಆಚಾರ್ಯ ಇನ್ನ ಹಾಗೂ ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಮಂಜುನಾಥ್ ಜೋಗಿ ಕಾರ್ಕಳ ಇವರನ್ನು ನೇಮಿಸಲಾಗಿದೆ.
ಕಾಪು ಉಸ್ತುವಾರಿಯಾಗಿ ಮಮತ ನಾಯ್ಕ್, ಹಿರಿಯಡ್ಕ ಉಸ್ತುವಾರಿಯಾಗಿ ಲತಿಫ್, ಬೈಂದೂರು ಉಸ್ತುವಾರಿಯಾಗಿ ಪ್ರಮೋದ್ ಪೂಜಾರಿ, ವಂಡ್ಸೆ ಉಸ್ತುವಾರಿಯಾಗಿ ಸಂಜಯ್ ಆಚಾರ್ಯ, ಉಡುಪಿ ಉಸ್ತುವಾರಿಯಾಗಿ ಪ್ರವೀಣ್ ಬಾರ್ಕುರು, ಬ್ರಹ್ಮವರ ಉಸ್ತುವಾರಿಯಾಗಿ ಸ್ಟೀಫನ್ ಪ್ರಖ್ಯಾತ್, ಕುಂದಾಪುರ ಉಸ್ತುವಾರಿಯಾಗಿ ರಕ್ಷಿತ್ ಶೆಟ್ಟಿ ಹಾಗೂ ಕೋಟ ಉಸ್ತುವಾರಿಯಾಗಿ ಮೊಹಮ್ಮದ್ ಆಫ್ರಿದ್ ಇವರು ನೇಮಕಗೊಂಡಿರುತ್ತಾರೆ.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿಗಳ ಆದೇಶದಂತೆ ಪಕ್ಷದ ಬಲವರ್ದನೆಗಾಗಿ ಜಿಲ್ಲೆಯ 5 ವಿಧಾನಸಭೆ ಹಾಗೂ 10 ಬ್ಲಾಕ್ ಹಾಗೂ ಬೂತ್ ಮಟ್ಟದ ಯುವ ಕಾಂಗ್ರೆಸ್ ಕಮಿಟಿಗಳಲ್ಲಿ ಅರ್ಹ ಮತ್ತು ಪಕ್ಷ ಸಿದ್ಧಾಂತಗಳಿಗೆ ಬದ್ಧರಾಗಿರುವ ಈ ಮೇಲ್ಕಂಡ ನೂತನ ಪದಾಧಿಕಾರಿಗಳನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ *ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ತಿಳಿಸಿರುತ್ತಾರೆ* .
previous post