ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಕೆರ್ವಾಶೆ ಇಲ್ಲಿ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಜೂ. 01 ರಂದು ಜರುಗಿತು.
ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ಬಣ್ಣ ಬಣ್ಣದ ಬಲೂನ್ ಹಾಗೂ ಸ್ಮೈಲಿಗಳನ್ನು ನೀಡಿ ಶಾಲಾ ಮುಖ್ಯ ದ್ವಾರದ ಮೂಲಕ ಶಾಲೆಗೆ ಬರಮಾಡಿಕೊಂಡು ಆರತಿ ಬೆಳಗಿ ತಿಲಕ ಹಚ್ಚಿ ಸ್ವಾಗತಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ನಾರಾಯಣ ಗುಡಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಹ ಶಿಕ್ಷಕಿ ಶ್ರೀಮತಿ ಸುನೀತಾ ನಾಯಕ್ ಇಲಾಖಾ ಮಾಹಿತಿಗಳನ್ನು ತಿಳಿಸುವುದರೊಂದಿಗೆ ಪೋಷಕರ ಜೊತೆ ಸಂವಾದ ನಡೆಸಿದರು.
ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಮತಿ ಸ್ವಾತಿ ವಿ.ನಾಯಕ್, ಕೆರ್ವಾಶೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಧರ್ಮರಾಜ್ ಹೆಗ್ಡೆ, ಶಾಲಾಭಿಮಾನಿಗಳಾಗಿರುವ ರಾಮಣ್ಣ ಸೇರ್ವೆಗಾರ್, ರಾಮರಾಯ್ ನಾಯಕ್ ಹಾಗೂ ನಾಗೇಶ್ ನಾಯಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇಲಾಖೆಯಿಂದ ಕೊಡ ಮಾಡಿದ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಹಿರಿಯ ಸಹಶಿಕ್ಷಕಿ ಶ್ರೀಮತಿ ಸುನೀತಾ ನಾಯಕ್ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಗೌರವ ಶಿಕ್ಷಕಿಯರಾದ ಕುಮಾರಿ ಸುಪ್ರೀತಾ ಧನ್ಯವಾದವಿತ್ತರು. ಶ್ರೀಮತಿ ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು.
