ಟ್ರಂಪ್ ಭಾರತವನ್ನು ಅವಮಾನಿಸಿದಾಗ ಮೌನವಹಿಸಿದ ಬಿಜೆಪಿಗರು ಮೋದಿಯನ್ನು ಟೀಕಿಸಿದಾಗ ಪ್ರತಿಕ್ರಿಯೆ ನೀಡುತ್ತಿರುವುದು ಇದು ದೇಶಕ್ಕಿಂತಲೂ ನಮ್ಮ ನಾಯಕ ಮೊದಲು ಎನ್ನುವ ಮನಸ್ಥಿತಿಯ ಸಂಕೇತ: ಪ್ರದೀಪ್ ಬೇಲಾಡಿ*
ಭಾರತ ದೇಶವನ್ನ ಅಂತರಾಷ್ಟ್ರೀಯವಾಗಿ ಡೊನಾಲ್ಡ್ ಟ್ರಂಪ್ ಟೀಕಿಸಿದಾಗ ಅವಹೇಳನ ಗೈದಾಗ ಮೌನವಾಗಿದ್ದ ಬಿಜೆಪಿ ನಾಯಕರುಗಳು ಮೋದಿಯನ್ನು ವಿರೋಧ ಪಕ್ಷಗಳು ಟೀಕಿಸಿದಾಗ ಎದ್ದು ನಿಲ್ಲುತ್ತಾರೆ, ಇದು ಬಿಜೆಪಿ ನಾಯಕರು ದೇಶಕ್ಕಿಂತಲೂ ತಮ್ಮ ನಾಯಕ ಮೊದಲು ಎನ್ನುವ ಮನಸ್ಥಿತಿಯನ್ನು ಹೊಂದಿರುದಕ್ಕೆ ಸಾಕ್ಷಿ ಎಂದು ಕಾರ್ಕಳ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಹೇಳಿದ್ದಾರೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ನಿರಂತರವಾಗಿ ಅವಹೇಳನ ಮಾಡುತ್ತಿದ್ದಾರೆ, ಭಾರತ ಪಾಕಿಸ್ತಾನ ನಡುವಿನ ಯುದ್ಧವನ್ನು ನಾನೆ ನಿಲ್ಲಿಸಿದ್ದು ಎಂದು 70ಕ್ಕಿಂತಲೂ ಅಧಿಕ ಬಾರಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿದ್ದಾರೆ, ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಪರ್ಮಾನು ಹೊರಡಿಸಿದ್ದಾರೆ, ಅಕ್ರಮ ವಲಸೆಯ ನೆಪದಲ್ಲಿ ಸಾವಿರಾರು ಭಾರತೀಯರನ್ನು ಅವಹೇಳನಕಾರಿ ರೀತಿಯಲ್ಲಿ ಭಾರತಕ್ಕೆ ಕಳುಹಿಸಿದ್ದಾರೆ, ಭಾರತದ ಉತ್ಪನ್ನಗಳಿಗೆ ವಿಪರೀತ ತೆರಿಗೆಯನ್ನು ವಿಧಿಸಿದ್ದಾರೆ, ಇಷ್ಟೆಲ್ಲಾ ಸಾಲದೆನ್ನುವಂತೆ ಈಗ ಡೋನಾಲ್ಡ್ ಟ್ರಂಪ್ ಭಾರತವನ್ನು ನರಕಕ್ಕೆ ಹೋಲಿಸಿ, ಭಾರತೀಯರನ್ನು ಅವಹೇಳನ ಮಾಡಿದ್ದಾರೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಭಾರತ ದೇಶವನ್ನು, ಭಾರತೀಯರನ್ನು ನಿರಂತರವಾಗಿ ಅವಹೇಳನ ಮಾಡುತ್ತಿದ್ದರು ಪ್ರಧಾನಿಯಾಗಲಿ , ಬಿಜೆಪಿ ನಾಯಕರಾಗಲಿ ತುಟಿಪಿಟಿಕ್ ಎನ್ನುತ್ತಿಲ್ಲ ಯಾಕೆ…?
ದೇಶವನ್ನು ಅವಹೇಳನ ಮಾಡಿದಾಗ ಮೌನವಾಗಿರುವ ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕಾಗಿ ಪ್ರಧಾನಿ ಮೋದಿಯವರನ್ನು ಟೀಕಿಸಿದಾಗ ದಿಗ್ಗನೆದ್ದು ಕುಳಿತು ಕುಳಿತುಕೊಳ್ಳುತ್ತಾರೆ, ಇದರ ಅರ್ಥವೇನು..??
ಊರಿಗೆಲ್ಲ ದೇಶಭಕ್ತಿಯ ಪಾಠ ಮಾಡುವ ಬಿಜೆಪಿ ನಾಯಕರಿಗೆ ಟ್ರಂಪ್ ದೇಶವನ್ನು ಅವಹೇಳನ ಮಾಡುತ್ತಿರುವುದು ಕಾಣಿಸುತ್ತಿಲ್ಲವೇ..? ದೇಶವನ್ನು ಟೀಕಿಸಿದಾಗ ಮೌನವಾಗಿದ್ದು ಪ್ರಧಾನಿ ಮೋದಿ ಅವರನ್ನು ಟೀಕಿಸಿದಾಗ ಪ್ರತಿಕ್ರಿಯೆ ನೀಡುವ ಬಿಜೆಪಿ ನಾಯಕರಿಗೆ ದೇಶಕ್ಕಿಂತಲೂ ಮೋದಿ ಮುಖ್ಯವಾಯಿತೇ..? ದೇಶವನ್ನು ಟೀಕಿಸಿದರೂ ಪರವಾಗಿಲ್ಲ ಆದರೆ ತಮ್ಮ ನಾಯಕನನ್ನು ಟೀಕಿಸುವಂತಿಲ್ಲ, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಗೌರವಕ್ಕೆ ಧಕ್ಕೆ ಆದರೂ ಪರವಾಗಿಲ್ಲಾ ದೇಶದೊಳಗೆ ತಮ್ಮ ನಾಯಕನ ವರ್ಚಸ್ಸು ಕಡಿಮೆಯಾಗಬಾರದು
ಎನ್ನುವ ಬಿಜೆಪಿ ನಾಯಕರ ಈ ಮನಸ್ಥಿತಿ ಇದು ದೇಶಕ್ಕೆ ಅಪಾಯಕಾರಿಯಾದದ್ದು. ದೇಶ ಮತ್ತು ವ್ಯಕ್ತಿ ಎಂದಾಗ ನಮ್ಮ ಮೊದಲ ಆಯ್ಕೆ ದೇಶವೇ ಆಗಿರಬೇಕು, ಪ್ರಧಾನಿ ಹುದ್ದೆ ಎನ್ನುವುದು ಇದು ಒಂದು ಕರ್ತವ್ಯವಾಗಿದೆ, ಪ್ರಧಾನಿಯಾಗಲಿ ಯಾರೇ ಆಗಲಿ ಅವರು ಯಾರು ದೇಶಕ್ಕಿಂತ ಮಿಗಿಲಲ್ಲ, ಪ್ರಧಾನಿ ಎಂದ ಕೂಡಲೇ ಅವರೇ ದೇಶವಲ್ಲ, ಈ ದೇಶ ಶಾಶ್ವತ ಇಲ್ಲಿ ಆಡಳಿತ ನಡೆಸುವವರು ಶಾಶ್ವತರಲ್ಲ, ದೇಶ ಉಳಿದರೆ ನಾವು ಉಳಿದೆವು, ಪಕ್ಷಕ್ಕಿಂತ ದೇಶ ಮೊದಲು ಎನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಂಡು ಇನ್ನಾದರೂ ತಮ್ಮ ಕೊಳಕು ರಾಜಕೀಯವನ್ನು ಬದಿಗಿಟ್ಟು ದೇಶದ ಗೌರವವನ್ನು ಕಾಪಾಡಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
previous post
